ಅಮೆರಿಕದಲ್ಲಿ ಟ್ರಂಪ್‌ -ಬೈಡೆನ್‌ ಬೆಂಬಲಿಗರ ನಡುವೆ ಮಾರಾಮಾರಿ

ವಾಷಿಂಗ್ಟನ್ , ನ. 15: ರಾಜಕೀಯ ಪಕ್ಷಗಳ ಬೆಂಬಲಿಗರ ಹೊಡೆದಾಡಿಕೊಳ್ಳುವ ಘಟನೆಗಳು ಅಮೆರಿಕದಲ್ಲೂ ನಡೆಯುತ್ತವೆ. ಅಧ್ಯಕ್ಷೀಯ ಚುನಾವಣೆ ಬಳಿಕ ಇದೀಗ ಸೋತಿರುವ ಡೊನಾಲಡ್‌ ಟ್ರಂಪ್‌ ಮತ್ತು ಗೆದ್ದಿರುವ ಜೋ ಬೈಡೆನ್‌ ಬೆಂಬಲಿಗರು ಬೀದಿ ಕಾಳಗ ಮಾಡಿಕೊಂಡಿದ್ದುಮ ಪರಿಣಾಮವಾಗಿ ಅನೇಕ ಮಂದಿ ಗಾಯಗೊಂಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಟ್ರಂಪ್ ಪರ ಲಕ್ಷಾಂತರ ಬೆಂಬಲಿಗರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಬೆಂಬಲಿಗರೂ ಕೂಡ ಸ್ಥಳಕ್ಕೆ ಬಂದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಜಟಾಪಟಿ ನಡೆದಿದೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್(ಬಿಎಲ್‌ಎಂ) ಹಾಗೂ ಟ್ರಂಪ್ ಅವರನ್ನು ಬೆಂಬಲಿಸುವ ಪ್ರೌಡ್ ಬಾಯ್ಸ್ ಗ್ರೂಪ್ ನಡುವೆ ಮಾರಾಮಾರಿ ನಡೆದಿದೆ.
ಘಟನೆ ವೇಳೆ ಟ್ರಂಪ್ ಹಾಗೂ ಬೈಡನ್ ಬೆಂಬಲಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.







































































error: Content is protected !!
Scroll to Top