ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳ ಮಾನವೀಯ ಸಹಾಯ

ಕಾರ್ಕಳ: ಮಂಜುನಾಥ್ ಪೈ ಪ್ರಥಮ ದರ್ಜೆ ಕಾಲೇಜು ಗುಂಡ್ಯಡ್ಕ ಇಲ್ಲಿಯ ವಿದ್ಯಾರ್ಥಿಗಳಾದ ಸೂರಜ್ ಮತ್ತು ತಂಡದವರು ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ಸ್ವದೇಶಿ ದೀಪಾವಳಿ ಹಣತೆಯನ್ನು ಮನೆಮನೆಗೆ ಭೇಟಿ ನೀಡಿ 191 ಪ್ಯಾಕೆಟ್ ಗಳನ್ನು ಮಾರಾಟ ಮಾಡಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಮಕ್ಕಳ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಸೂರಜ್, ಲಿಖಿತ್, ಪವನ್, ಸುಶ್ಮಿತಾ, ಸ್ವಾತಿ, ನಳಿನಿ, ಶ್ರದ್ದಾ, ಸುಪ್ರಿತಾ, ಶಬರಿ, ಅನ್ವಿತಾ ಶರ್ಮ, ಗೌತಮಿ, ಸುಹಾಸ್,ವಿಷ್ಣು ಕುಮಾರ್ ಹಾಗೂ ಸೌಮ್ಯ ಈ ತಂಡದಲ್ಲಿದ್ದರು.































































error: Content is protected !!
Scroll to Top