ಕೊರೊನಾ ನೋವು ಮರೆಸಿದ ದೀಪಾವಳಿ

ಆರು ತಿಂಗಳಿಂದ ಕೊರೊನ, ಲಾಕ್ ಡೌನ್, ಸೀಲ್ ಡೌನ್ ಇತ್ಯಾದಿ ಪದಗಳಿಂದ ಭೀತವಾಗಿದ್ದ ಜನರು ತಮ್ಮ ಎಲ್ಲಾ ನೋವನ್ನು ಮರೆತು ದೀಪಾವಳಿ ಹಬ್ಬವನ್ನು ಸ್ವಾಗತ ಮಾಡಿದ್ದು ಕಂಡು ಬಂದಿತು. ಖರ್ಚಿಗೆ ಹಣದ ಕೊರತೆ ಇದ್ದರೂ ಸಾಂಪ್ರದಾಯಿಕ ದೀಪಾವಳಿ ಆಚರಣೆಗೆ ಏನೂ ಕೊರತೆ ಆಗಲಿಲ್ಲ. ಬಟ್ಟೆ ಅಂಗಡಿ, ಹೂವಿನ ಅಂಗಡಿ, ಸಿಹಿ ತಿಂಡಿಗಳ ಅಂಗಡಿಗಳು ಒಳ್ಳೆಯ ವ್ಯಾಪಾರವನ್ನು ಪಡೆದವು. ಜನರು ಬೀದಿಗೆ ಇಳಿದು ಖರೀದಿ ಮಾಡುವ ದೃಶ್ಯ ಚೇತೋಹಾರಿ ಆಗಿತ್ತು. ಎಷ್ಟೋ ತಿಂಗಳಿಂದ ಖಾಲಿ ಬಿದ್ದಿದ್ದ ಮಾರುಕಟ್ಟೆ ದೀಪಾವಳಿ ಹಬ್ಬದ ಹೊತ್ತಿಗೆ ಚೇತರಿಸಿಕೊಂಡಿದ್ದು ನಿಜಕ್ಕೂ ಗಮನೀಯ. ಪಟಾಕಿ ವ್ಯಾಪಾರ ಕಳೆಗುಂದಿದರೂ ಆದರೆ ಹಣತೆ, ಹೂವು, ಹಣ್ಣು, ಸಿಹಿ ತಿಂಡಿ, ಸೀರೆ, ಚಿನ್ನದ ಅಂಗಡಿಗಳು ಉತ್ತಮ ವ್ಯಾಪಾರವನ್ನು ದಾಖಲಿಸಿದವು. ಮುಂದಿನ ದಿನಗಳು ಆಶಾದಾಯಕ ಆಗಿರಲಿ ಎನ್ನುವುದು ಜನರ ಮನದ ಆಳದ ಅಭಿಮತ.





























































































































































































































error: Content is protected !!
Scroll to Top