ಕೆಎಂಇಎಸ್‌ನಲ್ಲಿ ಶಿಕ್ಷಕರ ಯೋಗಕ್ಷೇಮ ಮತ್ತು ಒತ್ತಡ ನಿವಾರಣೆ ಕಾರ್ಯಾಗಾರ

0

ಕಾರ್ಕಳ : ಕುಕ್ಕುಂದೂರಿನ ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ತಾಲೂಕಿನ ಅನುದಾನರಹಿತ ಶಾಲಾ ಶಿಕ್ಷಕರಿಗೆ ಶಿಕ್ಷಕರ ಯೋಗಕ್ಷೇಮ ಮತ್ತು ಒತ್ತಡ ನಿವಾರಣೆ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು. ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಕೂಡ ಯಾವುದೇ ರೀತಿಯ ಶೈಕ್ಷಣಿಕ ಮಾಹಿತಿಯಿಂದ ಮತ್ತು ತರಬೇತಿಯಿಂದ ಹೊರ ಉಳಿಯಬಾರದು ಎಂಬ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಶಿಕ್ಷಕರು ಇದರ ಸದುಪಯೋಗ ಪಡೆಯಬೇಕೆಂದರು. ವೇದಿಕೆಯಲ್ಲಿ ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್, ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕಿ ಕುಮಾರಿ ಚಿಂತನ, ತಾಲೂಕು ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ವೆಂಕಟರಮಣ ಕಲ್ಕೂರ, ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲೊಲಿಟಾ ಡಿ’ಸಿಲ್ವಾ ಉಪಸ್ಥಿತರಿದ್ದರು. ಅಕ್ಷತಾ ಸ್ವಾಗತಿಸಿ, ಆಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ವಿನಯ ವಂದಿಸಿದರು.

Previous articleಮಿತ್ರ ಪ್ರಭಾ ಹೆಗ್ಡೆ ಅವರಿಗೆ ಸನ್ಮಾನ
Next article2021ನೇ ವರ್ಷದ ಸಾರ್ವಜನಿಕ ರಜಾ ದಿನಗಳ ಪಟ್ಟಿ

LEAVE A REPLY

Please enter your comment!
Please enter your name here