ತುಂಬಾ ನಿರೀಕ್ಷೆ ಮೂಡಿಸಿದ್ದ ಹೈದರಾಬಾದ್ ತಂಡ ಐಪಿಲ್ ಕೂಟದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಈ ವರ್ಷದ ಯಾತ್ರೆ ಮುಗಿಸಿದೆ. ನಿನ್ನೆ ನಡೆದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ತಂಡವು ಹೈದರಾಬಾದ್ ತಂಡವನ್ನು 17 ರನ್ನಿನ ಅಂತರದಲ್ಲಿ ಸೋಲಿಸಿತು. ಕೇನ್ ವಿಲಿಯಂಸನ್ ಕ್ರೀಸಲ್ಲಿ ಇರುವ ತನಕವೂ ಜಯವು ಹೈದರಾಬಾದ್ ತಂಡದೊಂದಿಗೆ ಇತ್ತು. ಆದರೆ ವಿಲಿಯಂಸನ್ ವಿಕೆಟ್ ಪತನವಾದದ್ದು, ಒಂದೇ ಓವರಿನಲ್ಲಿ ಕಾಗಿಸೋ ರಬಡ ಮೂರು ವಿಕೆಟ್ ಕಬಳಿಸಿದ್ದು ಎಲ್ಲವೂ ಹೈದರಾಬಾದ್ ಹೋರಾಟಕ್ಕೆ ಮುಳುವಾಯಿತು. ಸುಲಭದ ಮೂರು ಕ್ಯಾಚನ್ನು ಕೈಬಿಟ್ಟು ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಬೃಹತ್ ಮೊತ್ತವನ್ನು ಬೆಂಬತ್ತಿ ಹೋಗುವಾಗ ವಾರ್ನರ್ ಮತ್ತು ಮನೀಷ್ ಪಾಂಡೆ ಅಗ್ಗಕ್ಕೆ ಔಟ್ ಆದದ್ದು ಸೋಲಿಗೆ ಕಾರಣವಾಯಿತು. ಆರಂಭದ ಡೆಲ್ಲಿ ಬ್ಯಾಟಿಂಗ್ ಹೊತ್ತಲ್ಲಿ ಶಿಖರ್ ಧವನ್ ಮತ್ತು ಹ್ಯಾಟ್ ಮೇಯರ್ ಸಿಡಿದು ನಿಂತ ಕಾರಣ ಡೆಲ್ಲಿ ತಂಡ ಬೃಹತ್ ಮೊತ್ತ ಪೇರಿಸಿತು. ಹೈದರಾಬಾದ್ ತಂಡ ಸಾಕಷ್ಟು ಹೋರಾಟವನ್ನು ಕೊಟ್ಟರೂ 17 ರನ್ನಿನ ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ನಡೆಯಿತು. ಇನ್ನು ಏನಿದ್ದರೂ ಡೆಲ್ಲಿ ಮತ್ತು ಮುಂಬೈ ತಂಡಗಳ ಫೈನಲ್ ರೋಚಕತೆ ಮಾತ್ರ ಬಾಕಿ ಇದೆ.
ಮೂರು ಕ್ಯಾಚು ಬಿಟ್ಟು ಸೋಲು ಆಹ್ವಾನಿಸಿಕೊಂಡ ಹೈದರಾಬಾದ್







































