ಉಡುಪಿ, ನ.4:ಬಸ್ ಮಾಲಕರೊಬ್ಬರನ್ನು ಹಾಡುಹಗಲೇ ಅವರ ಕಚೇರಿಗೆ ನುಗ್ಗಿ ಸಾಯಿಸುವ ಯತ್ನ ಮಣಿಪಾಲದಲ್ಲಿ ಸಂಭವಿಸಿದೆ. ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ಎಕೆಎಂಎಸ್ ಬಸ್ ಕಚೇರಿಗೆ ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಪ್ರಯತ್ನ ಮಾಡಿದ್ದಾರೆ.
ತಲವಾರು ಸಮೇತ ಬಂದಿದ್ದ ದುಷ್ಕರ್ಮಿಗಳು ಆದರೆ ಕಚೇರಿಯಲ್ಲಿ ಏಳೆಂಟು ಮಂದಿ ಇದ್ದ ಕಾರಣ ಹಲ್ಲೆ ಮಾಡದೆ ತಲವಾರು ತೋರಿಸಿ ಬೆದರಿಸಿ ಹೋಗಿದ್ದಾರೆ. ಬಸ್ ಮಾಲಕ ಸೈಫುದ್ದೀನ್ ಅವರ ಮೇಲೂ ಹಲವು ಕೇಸುಗಳಿವೆ ಎನ್ನಲಾಗಿದೆ. ಕೊಲೆ ಪ್ರಕರಣಗಳಲ್ಲೂ ಅವರು ಆರೋಪಿಯಾಗಿದ್ದಾರೆ.
