
ಕಾರ್ಕಳ,ಅ. 31 : ನವೀಕೃತ ಜಾಮಿಯ ಮಸೀದಿ ಮಿಯಾರಿನಲ್ಲಿ ವರ್ಷಂಪ್ರತಿ ನಡೆಯುವ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಪ್ರಯುಕ್ತ ಮಿಲಾದುನ್ನಬಿಯನ್ನು ಕೊರೊನ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯ ಚೌಕಟ್ಟಿನಲ್ಲಿ ಜಮಾತಿನ ಅಧ್ಯಕ್ಷರಾದ ಶೈಕ್ ಶಬ್ಬಿರ್ ಅವರ ಮುಂದಾಳತ್ವದಲ್ಲಿ ಸರಳವಾಗಿ ಆಚರಿಸಲಾಯಿತು.
ಧರ್ಮಗುರುಗಳಾದ ಅಬ್ದುಲ್ ರಾಝಿಕ್ ರವರು ಮೌಲೂದ್ ಪಾರಾಯಣ ನಡೆಸಿ ಈದ್ ಮಿಲಾದ್ ಸಂದೇಶವನ್ನು ನೀಡಿದರು. ನಂತರ ಮಾತನಾಡಿದ ಅಧ್ಯಕ್ಷರಾದ ಶೈಕ್ ಶಬ್ಬೀರ್ ನಮ್ಮ ಧರ್ಮವನ್ನು ಪ್ರೀತಿಸುವ ಜೊತೆಗೆ ಇತರರು ಧರ್ಮವನ್ನು ಗೌರವಿಸಬೇಕು ಎಂದು ಪ್ರವಾದಿಯವರು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.