
ಕಾರ್ಕಳ, ಅ. 31: ದಿ. ಪ್ರದಾನಿ ಇಂದಿರಾ ಗಾಂಧಿಯವರ ತತ್ವ ಸಿದ್ಧಾಂತಗಳು ದೇಶದ ಸಮಾನತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಇಂದಿರಾ ಹೊರತಾದ ಸ್ವಾತಂತ್ರ್ಯಾನಂತರದ ಭಾರತದ ಇತಿಹಾಸವನ್ನು ಕಲ್ಪಿಸಲೂ ಸಾಧ್ಯವಿಲ್ಲ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕೌನ್ಸಿಲ್ ಹಾಲ್ ನಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯ ತಿಥಿ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
ದೇಶೀಯ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಆಡಳಿತದೊಳಗಡೆ ಸೇರಿಸಿದ ವಲ್ಲಭ ಭಾಯ್ ಪಟೇಲರ ನಿರ್ಭಿಢೆಯ ನಿರ್ಧಾರ ಅವರನ್ನು ಒಬ್ಬ ಉಕ್ಕಿನ ಮನುಷ್ಯನನ್ನಾಗಿಸಿತ್ತು ಎಂದರು.
ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ, ಪ್ರಧಾನ ಕಾರ್ಯದರ್ಶಿ ಜಾಜ್೯ ಕ್ಯಾಸ್ತಲಿನೊ, ಯುವ ಪ್ರತಿಭೆ ಸುಷ್ಮಾ ಹಾಗೂ ಇತರ ಗಣ್ಯರು ಸಂದರ್ಭೋಚಿತವಾಗಿ ಮಾತಾಡಿದರು.
ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸದಸ್ಯ ಸಿರಿಯಣ್ಣ ಶೆಟ್ಟಿ, ರಾಜ್ಯ ಯುವ ಕಾರ್ಯದರ್ಶಿ ರವಿಶಂಕರ ಸೇರ್ವೆಗಾರ್, ಬ್ಲಾಕ್ ಉಪಾಧ್ಯಕ್ಷ ದಯಾನಂದ ಬಂಗೇರ,ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಮಹಿಳಾಧ್ಯಕ್ಷೆ ನಳಿನಿ ಆಚಾರ್ಯ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ಎಸ್ಸಿ ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ, ಐಟಿ ಸೆಲ್ ಸತೀಶ್ ಕಾರ್ಕಳ, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಪುರಸಭಾ ಸದಸ್ಯರಾದ ಶುಭದಾ ರಾವ್, ಸೋಮು, ಪ್ರತಿಮಾ, ಹರೀಶ್ ದೇವಾಡಿಗ, ಪ್ರಭಾ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಸ್ವಾಗತಿಸಿದರು. ಸುಶಾಂತ್ ಸುಧಾಕರ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.