ಎಲ್ಲರಿಗೂ ಸಿಗಲಿದೆ ಕೊರೊನಾ ಲಸಿಕೆ : ದೇಶಕ್ಕೆ ಮೋದಿ ವಾಗ್ದಾನ


ದಿಲ್ಲಿ, ಅ.29: ಕೊರೊನಾ ಲಸಿಕೆ ಎಲ್ಲ ಭಾರತೀಯರಿಗೆ ಸಿಗಲಿದೆ. ಯಾರಿಗೂ ಲಸಿಕೆ ಸಿಕ್ಕಿಲ್ಲ ಅಂಥ ಆಗಬಾರದು. ಲಸಿಕೆ ವಿತರಣೆ ಮತ್ತು ನಿರ್ವಹಣೆಗಾಗಿ ತಜ್ಞರ ತಂಡವೊಂದನ್ನು ಈಗಾಗಲೇ ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯಾವಾಗ ಲಸಿಕೆ ನಮ್ಮ ಕೈಗೆ ಸಿಗುತ್ತದೋ ಅದನ್ನು ಎಲ್ಲ ಭಾರತೀಯರಿಗೆ ತಲುಪಿಸುವುದು ನಮ್ಮ ಹೊಣೆ. ಇದು ನಾನು ದೇಶಕ್ಕೆ ನೀಡವ ವಾಗ್ದಾನ. ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ಹೇಳಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗಾಗಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಬಿಜೆಪಿ ನಮ್ಮನ್ನು ಗೆಲ್ಲಿಸಿದರೆ ಕೊರೊನಾ ಲಸಿಕೆ ಉಚಿತವಾಗಿ ನೀಡುತ್ತೇವೆ ಎಂಬ ಆಶ್ವಾಸನೆ ನೀಡಿತ್ತು. ಇದು ಭಾರಿ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಪ್ರಧಾನಿ ಸಂದರ್ಶನದಲ್ಲಿ ಹೇಳಿದ ಮಾತು ಪ್ರಾಮುಖ್ಯತೆ ಪಡೆದುಕೊಂಡಿದೆ.ಮೊದಲ ಹಂತದಲ್ಲಿ ತೀರಾ ಅಗತ್ಯವಿರುವವರನ್ನು ಆದ್ಯತೆಯಲ್ಲಿ ಪರಿಗಣಿಸಿದರೂ ಪ್ರತಿಯೊಬ್ಬ ನಾಗರಿಕನಿಗೆ ಲಸಿಕೆ ನೀಡುವುದು ಸರಕಾರದ ಜವಾಬ್ದಾರಿ. ಇದರ ಎಲ್ಲ ಮಾರ್ಗಸೂಚಿಯನ್ನು ತಜ್ಞರ ತಂಡ ರಚಿಸಲಿದೆ. ಯಾರೂ ಲಸಿಕೆ ಸಿಗದೆ ಸಂಕಷ್ಟಗೊಳಗಾಗುವುದಿಲ್ಲ. 28,000ಕ್ಕೂ ಅಧಿಕ ಕೋಲ್ಡ್‌ ಚೈನ್‌ ಪಾಯಿಂಟ್ಸ್‌ ಮೂಲಕ ಲಸಿಕೆಯನ್ನು ಸಂಗ್ರಹಿಸಿ ಇಟ್ಟು ವಿತರಿಸಲಾಗುವುದು. ಕೊಟ್ಟಕೊನೆಯ ವ್ಯಕ್ತಿಗೂ ಲಸಿಕೆ ಸಿಗುವ ತನಕ ಸರಕಾರ ವಿಶ್ರಮಿಸುವುದಿಲ್ಲ. ಇದಕ್ಕಾಗಿ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮಟ್ಟಗಳಲ್ಲಿ ತಂಡಗಳನ್ನು ರಚಿಸಲಾಗುವುದು. ವ್ಯವಸ್ಥಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಲಸಿಕೆಯನ್ನು ವಿತರಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

































































error: Content is protected !!
Scroll to Top