ಇಮ್ಯುನಿಟಿಗಾಗಿ ಏನೇನೋ ಮಾಡುವ ಬದಲು ಮೊಸರು ಸೇವಿಸಿ


ಮೊಸರು ಸೇವಿಸಿದರೆ ದೇಹ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಮೊಸರು ಹೀಟ್, ಮಜ್ಜಿಗೆ ತಂಪು. ಆದರೆ ಮೊಸರಿನಿಂದ ತುಂಬ ಲಾಭಗಳು ಇವೆ.ಜೀರ್ಣಕ್ರಿಯೆ
ತಿಂದ ಆಹಾರ ಚೆನ್ನಾಗಿ ಪಚನಗೊಳ್ಳಲು ಮೊಸರು ಬೇಕು. ಕೆಲವರು ಪ್ರತಿದಿನವೂ ಮೊಸರು ತಿನ್ನುವ ಅಭ್ಯಾಸ ಇಟ್ಟಕೊಂಡಿರುತ್ತಾರೆ. ಅಂತವರಿಗೆ ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ.

ಮೂಳೆಗಳ ಆರೋಗ್ಯ
ಹಾಲು ಹಾಗೂ ಹಾಲಿನ ಎಲ್ಲಾ ಉತ್ಪನ್ನಗಳಲ್ಲೂ ಕ್ಯಾಲ್ಸಿಯಂ ಇರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಮೂಳೆ ಗಟ್ಟಿ ಆಗಲು ಹಾಲು ಹಾಗೂ ಹಾಲಿನ ಪದಾರ್ಥ ಬಳಸಬೇಕು.

ರೋಗನಿರೋಧಕ ಶಕ್ತಿ
ಪ್ರತಿದಿನವೂ ಒಂದು ಹೊತ್ತು ಮೊಸರು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇಮ್ಯೂನಿಟಿಗಾಗಿ ಏನೇನೋ ಮಾಡುವ ಬದಲು ಹೀಗೆ ದಿನವೂ ಮೊಸರು ಸೇವಿಸಿ ರೋಗದಿಂದ ರಕ್ಷಣೆ ಪಡೆಯಬಹುದು.

ಕೂದಲು
ಬರೀ ಆರೋಗ್ಯಕ್ಕೆ ಅಲ್ಲ, ಬಾಹ್ಯ ಸೌಂದರ್ಯಕ್ಕೂ ಇದು ಸಹಾಯಕ. ವಾರಕ್ಕೆ ಒಮ್ಮೆ ತಲೆಗೆ ಮೊಸರು ಹಚ್ಚಿ ಸ್ನಾನ ಮಾಡಿದರೆ ಕೂದಲು ಸಿಲ್ಕಿಯಾಗಿರುತ್ತದೆ. ಇನ್ನು ದೇಹದ ಒಳಗಿನಿಂದಲೂ ಕೂದಲು ಚೆನ್ನಾಗಿ ಬೆಳೆಯಲು ಮೊಸರು ಸಹಕರಿಸುತ್ತದೆ.

ಆರೋಗ್ಯಕರ ಹೃದಯ
ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಮೊಸರು ತಿನ್ನುವುದರಿಂದ ಆರೋಗ್ಯಕರ ಹೃದಯ ನಮ್ಮದಾಗಲಿದೆ.

ಚರ್ಮ ರಕ್ಷಣೆ
ಚರ್ಮ ಸದಾ ಹೊಳಪಾಗಿರಲು ದುಬಾರಿ ಕ್ರೀಂಗಳ ಮೊರೆ ಹೋಗದೆ ಮನೆಯಲ್ಲಿಯೇ ಮುಖಕ್ಕೆ ಮೊಸರು ಹಚ್ಚುವುದು, ತಿನ್ನುವುದು ಮಾಡಿ. ಇದು ನಿಮ್ಮ ಪೂರ್ಣ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕಡ್ಲೆಹಿಟ್ಟಿನ ಜೊತೆ ಮೊಸರು ಹಾಕಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಬಹುದು.
ಕೃಪೆ :ಜಾಗೃತಿ ಫೌಂಡೇಶನ್ ಕಾರ್ಕಳ







































































error: Content is protected !!
Scroll to Top