ಅಜೆಕಾರು : ಮರ್ಣೆ ಗ್ರಾಮದ ಮಂಗಳನಗರ ಎಂಬಲ್ಲಿರುವ ಕಾರ್ಕಳದ ಪ್ರವೀಣ ಆಳ್ವ ಮಾಲಕತ್ವದ ಸೌತ್ ಇಂಡಿಯಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ 125 ಕೆ.ಜಿ. ಸಂಸ್ಕರಿಸಿದ ಗೇರುಬೀಜವು ಕಳವಾಗಿದೆ. ಅ. 14ರಂದು ಬೆಳಿಗ್ಗೆ 7:30ರ ವೇಳೆ ಫ್ಯಾಕ್ಟರಿಯ ಬೀಗ ತೆಗೆದು ನೋಡಿದಾಗ ರೂ. 75 ಸಾವಿರ ಮೌಲ್ಯದ ಗೇರುಬೀಜ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಗಿರೀಶ್ ಕಾಮತ್ ದೂರು ನೀಡಿರುತ್ತಾರೆ.
ಮರ್ಣೆ : 75 ಸಾವಿರ ರೂ. ಮೌಲ್ಯದ ಗೇರುಬೀಜ ಕಳವು


































