ಡ್ರಗ್‌ ನಂಟು : ಅನುಶ್ರೀ ಸುದೀರ್ಘ ವಿಚಾರಣೆ

ಮಂಗಳೂರು, ಸೆ. 26: ಡ್ರಗ್ ಜಾಲದಲ್ಲಿ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ನೀಡಿದ ಸಮನ್ಸ್‌ ಅನುಸರಿಸಿ  ನಟಿ, ನಿರೂಪಕಿ ಅನುಶ್ರೀ ಪಣಂಬೂರಿನ ಎಸಿಪಿ ಕಚೇರಿಯಲ್ಲಿ  ಇಂದು ವಿಚಾರಣೆಗೆ ಒಳಗಾಗಿದ್ದಾರೆ.  ಸುದೀರ್ಘ ನಾಲ್ಕು ಗಂಟೆಗಳ ಕಾಲ ಡ್ರಿಲ್ ಆದ ಅನುಶ್ರೀಗೆ ಪೊಲೀಸರು ಪ್ರಶ್ನೆಗಳ ಸರಮಾಲೆಯನ್ನೇ ಕೇಳಿದ್ದಾರೆ. ವಿಚಾರಣೆ ಬಳಿಕ ಹೊರಬಂದ ಅನುಶ್ರೀ ಮಾಧ್ಯಮದ ಪ್ರಶ್ನೆಗಳಿಗೆ ಸಾದಾ ಸೀದ ಎನ್ನುವ ರೀತಿ ಉತ್ತರಿಸಿದರು. ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಇನ್ನೇನಾದ್ರೂ ವಿಚಾರಣೆಗೆ ಬರಬೇಕು ಅಂತ ಕರೆದರೆ ಬರುತ್ತೇನೆ. 12 ವರ್ಷಗಳ ಹಿಂದೆ ಕಿಶೋರ್ ಮತ್ತು ತರುಣ್ ನನಗೆ ಕೊರಿಯೋಗ್ರಾಫ್ ಮಾಡಿದ್ದರು. ಅದಷ್ಟೇ ನಮಗೆ ಪರಿಚಯ. ಆನಂತರ ಅವರ ಜೊತೆ ಬೇರೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದರು. 

ಸಿನಿಮಾ ರಂಗದಲ್ಲಿ ಡ್ರಗ್ ಬಗ್ಗೆ ಕೇಳಿದ ಪ್ರಶ್ನೆಗೆ, ಪೊಲೀಸರು ಎಲ್ಲ ಸೇರಿ ತನಿಖೆ ನಡೆಸುತ್ತಿದ್ದಾರೆ. ಡ್ರಗ್ ನಮ್ಮ ಸಮಾಜ, ನಾಡನ್ನು ಕಾಡುತ್ತಿರುವ ಭೂತ. ಅದನ್ನು ನಿವಾರಿಸಲು ಎಲ್ಲರೂ ಪೊಲೀಸರ ಜೊತೆ ಕೈಜೋಡಿಸಬೇಕು. ನಾನು ಜವಾಬ್ದಾರಿಯುತ ನಾಗರಿಕಳಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಎಲ್ಲರೂ ಪೊಲೀಸರಿಗೆ ಸಹಕರಿಸಬೇಕು ಎಂದು ಹೇಳಿದರು. ಇನ್ನು ನೀವು ಪಾರ್ಟಿ ಮಾಡಿದ್ದೀರಂತೆ ಎಂಬ ಪ್ರಶ್ನೆಗೆ, ಅದು ನೀವು ಹೇಳುವುದು. ನಾನು ಯಾವ ಪಾರ್ಟಿನೂ ಮಾಡಿಲ್ಲ. ಪಾರ್ಟಿಗೆ ಹೋಗಿಯೂ ಇಲ್ಲ ಎಂದು ಹೇಳಿದ್ದಾರೆ.

































































error: Content is protected !!
Scroll to Top