ಬಿಜೆಪಿಗೆ ಮೇಜರ್‌ ಸರ್ಜರಿ : ತೇಜಸ್ವಿ ಸೂರ್ಯ ಯುವ ಮೋರ್ಚಾ ಅಧ್ಯಕ್ಷ ; ಸಿ.ಟಿ. ರವಿ ಪ್ರಧಾನ ಕಾರ್ಯದರ್ಶಿ

ದಿಲ್ಲಿ, ಸೆ. 26 : ಹಲವು ಪದಾಧಿಕಾರಿಗಳ ಸ್ಥಾನಪಲ್ಲಟಗೊಳಿಸುವ ಹಾಗೂ  ಹಾಗೂ ಕೆಲವರನ್ನು ಕೈಬಿಡುವ ಮೂಲಕ ಅಸಧ್ಯಕ್ಷ ಜೆ.ಪಿ.ನಡ್ಡಾ ಬಿಜೆಪಿಗಿಂದು ದೊಡ್ಡ ಮಟ್ಟದಲ್ಲಿ ಸರ್ಜರಿ ಮಾಡಿದ್ದಾರೆ. ಕರ್ನಾಟಕದಿಂದ ಮೊದಲ ಸಲ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ.

ಛತ್ತೀಸ್‌ ಗಢದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌, ಮುಕುಲ್‌ ರಾಯ್‌, ಅನ್ನಪೋರ್ಣಾ ದೇವಿ ಮತ್ತು ಬೈಜಯಂತ್‌ ಜಯ್‌ಪಾಂಡ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಧಾ ಮೋಹನ್‌ ಸಿಂಗ್‌, ರೇಖಾ ವರ್ಮಾ, ಭಾರತಿ ಬೆನ್‌ ಶಿಯಾಲ್‌, ಡಿಕೆ ಅರುಣಾ, ಡಾ. ಎಂ. ಚುಬ ಅವೊ ಮತ್ತು ಅಬ್ದುಲ್‌ ಕುಟ್ಟಿ ಅವರನ್ನು ನೂತನವಾಗಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಬಿಹಾರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ರಾಮ್‌ ಮಾಧವ್‌, ಮುರಳೀಧರ ರಾವ್‌, ಸರೋಜ್‌ ಪಾಂಡೆ ಮತ್ತು ಅನಿಲ್‌ ಜೈನ್‌ ಅವರಿಗೆ ಕಾರ್ಯದರ್ಶಿ ಹುದ್ದೆಯಿಂದ ಕೊಕ್‌ ಕೊಡಲಾಗಿದೆ. ದುಷ್ಯಂತ್‌ ಕುಮಾರ್‌ ಗೌತಮ್‌, ಡಿ. ಪುರಂದೇಶ್ವರಿ, ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮತ್ತು ತರುಣ್‌ ಚಗ್‌  ಅವರನ್ನು  ನೂತನವಾಗಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.







































































error: Content is protected !!
Scroll to Top