ಕಾರ್ಕಳ: ಇದೀಗ ಬಂದ ಬ್ರೇಕಿಂಗ್ ಸುದ್ಧಿ ! ಕಾರ್ಕಳ -ಹೆಬ್ರಿಯಲ್ಲಿ ಕೊರೊನಾದಿಂದ 33 ಮಂದಿ ಸಾವು . 250 ಮಂದಿಗಿಂತಲೂ ಅಧಿಕ ಮಂದಿ ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಇದೊಂದು ಭಯಾನಕ ಸುದ್ದಿ .ಬೇಸರದ ಸುದ್ದಿಯೂ ಹೌದು. ಇದಕ್ಕೆ ಈ ವರೆಗೆ ಔಷಧಿ ಕಂಡು ಹಿಡಿಯಲಾಗಿಲ್ಲ ಎಂಬುದು ಪರಮ ಸತ್ಯವೂ ಹೌದು.ನಾವು ಈಗಾಗಲೇ ಹಲವರನ್ನು ಕಳೆದುಕೊಂಡಾಯಿತು. ನಿತ್ಯವೂ ಕಳೆದುಕೊಳ್ಳುತ್ತಿದ್ದೇವೆ
ಕಾರ್ಕಳ ಪೇಟೆಗೆ ನೀವು ಒಮ್ಮೆ ಬನ್ನಿ.ಎಷ್ಟು ಮಂದಿ ಮಾಸ್ಕ್ ಧರಿಸಿದ್ದಾರೆ ಎಂಬುದನ್ನು ನೋಡಿ. ಎಷ್ಟುಮಂದಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದಾರೆ ಎಂಬುದನ್ನು ನೋಡಿ. ನಮ್ಮ ಜನ ಕೊರೊನ ಎಂಬ ರೋಗವೊಂದು ನಮ್ಮ ಸುತ್ತ ತಿರುಗುತ್ತಿದೆ ಎಂಬುದನ್ನೇ ಮರೆತಿದ್ದಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಮಾಸ್ಕ್ ಹಾಕಿಕೊಂಡವರ ಸಂಖ್ಯೆ ಬಹಳ ವಿರಳವಾಗಿರುತ್ತದೆ.ಸರಕಾರ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿ ಅದರ ಪ್ರಯತ್ನ ನಿಲ್ಲಿಸಿಬಿಟ್ಟಿತು .ಇನ್ನೂ ಒಂದು ವಿಷಯವೆಂದರೆ ಕೊರೊನ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದು ಖುಷಿ ಪಡುವ ಹಾಗಿಲ್ಲ .ಯಾವುದೇ ಕ್ಷಣದಲ್ಲಿಯೂ ಅದು ಪಾಸಿಟಿವ್ ಆಗಬಹುದು .ಇನ್ನೂ ಜನರಿಗೆ ಹೇಳಿ ಪ್ರಯೋಜನವೇ ಇಲ್ಲ .
ನಾವು ಮಾಡಬಹುದಾದ ಪ್ರಯತ್ನಗಳನ್ನು ಯೋಚಿಸುವಾಗ ಈ ವರೆಗೆ ಬಂದ ಕೆಲವೊಂದು ವೈದ್ಯಕೀಯ ಸಲಹೆಗಳನ್ನು ಗಮನಿಸಿದಾಗ

1. ಪ್ರತಿ ನಿತ್ಯ ಬಿಸಿನೀರು ಮಾತ್ರ ಸೇವಿಸುವುದು 2. ಕುದಿಯುತ್ತಿರುವ ನೀರಿನ ಆವಿಯನ್ನು ದಿನಕ್ಕೆ ಕನಿಷ್ಠ 3 ಬಾರಿ ಸೇವಿಸುವುದು .
3.ಮನೆಯಿಂದ ಆದಷ್ಟು ಹೊರಗೆ ಬಾರದಿರುವುದು. 4.ಕಷಾಯದ ಪುಡಿ ತಯಾರಿಸಿಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು .
5.ನೆಲನೆಲ್ಲಿ, ತುಳಸಿ, ಅಮೃತ ಬಳ್ಳಿ ಕಷಾಯ ಕುಡಿಯುವುದು ಹೀಗೆ ಅನೇಕ ರೀತಿಯ ಮುನ್ನೆಚ್ಚರಿಕೆ ವಹಿಸುಬಹುದು.ಮುಖ್ಯವಾಗಿ ನಾವು ಜವಾಬ್ದಾರಿಯುತವಾಗಿ ವರ್ತಿಸುವುದನ್ನು ಕಲಿಯಬೇಕು. ಇನ್ನೂ ನನಗೇನು ಆಗದು ಗಟ್ಟಿಮುಟ್ಟಾಗಿದ್ದೇನೆ ಎಂದು ಭಂಡತನ ತೋರಿಸಿದರೆ ಪರಿಣಾಮ ವಿಪರೀತವಾದೀತು.
ಕೆ .ಸುಬ್ರಹ್ಮಣ್ಯ ಆಚಾರ್ಯ, ಹಿರಿಯಂಗಡಿ ಕಾರ್ಕಳ



































