ಮುಂಬಯಿ, ಸೆ. 25: ಬಾಲಿವುಡ್ ತಾರೆಯರು ಡ್ರಗ್ ಪಡೆದುಕೊಳ್ಳಲು ಚಾಟಿಂಗ್ ನಡೆಸುತ್ತಿದ್ದ ವಾಟ್ಸಪ್ ಗ್ರೂಪ್ ಗೆ ದೀಪಿಕಾ ಪಡುಕೋಣೆಯೇ ಅಡ್ಮಿನ್ ಆಗಿದ್ದರು ಎಂಬ ಮಾಹಿತಿಯನ್ನು ನಾರ್ಕೋಟಿಕ್ಸ್ ಬ್ಯೂರೊ ಬಹಿರಂಗಪಡಿಸಿದೆ.
ದೀಪಿಕಾ ಅವರ ಮೆನೇಜರ್ ಕರಿಷ್ಮಾ ಪ್ರಕಾಶ್ ಮತ್ತು ಜಯಾ ಸಾಹಾ ಈ ಗ್ರೂಪಿನಲ್ಲಿದ್ದರು. ಇವರಿಬ್ಬರನ್ನು ಎನ್‌ಸಿಬಿ ಇಂದು ವಿಚಾರಣೆಗೊಳಪಡಿಸಿದೆ. ದೀಪಿಕಾ ವಿಚಾರಣೆ ನಾಳೆ ನಡೆಯಲಿದೆ.
ದೀಪಿಕಾ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್‌ಗೆ ಎನ್‌ಸಿಬಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಪೈಕಿ ರಕುಲ್ ಇಂದು ಬೆಳಗ್ಗೆ ವಿಚಾರಣೆ ಎದುರಿಸಿದ್ದಾರೆ.

ಇದರ ಬೆನ್ನಿಗೆ ಕರಿಷ್ಮಾ ಪ್ರಕಾಶ್ ಬಂದರು. ಇವರಿಬ್ಬರನ್ನು ಮುಖಾಮುಖಿಯಾಗಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ಸಂದರ್ಭದಲ್ಲಿ ರಕುಲ್ ತಾನು ಡ್ರಗ್ ಕುರಿತಾಗಿ ರಿಯಾ ಚಕ್ರವರ್ತಿ ಜೊತೆಗೆ ಮಾತನಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂಬುದಾಗಿ ನಾರ್ಕೋಟಿಕ್ಸ್ ಅಧಿಕಾರಿಗಳು ತಿಳಿಸಿದ್ದಾರೆ.






































































