ಮಂಗಳೂರು, ಸೆ.20 : ಮುಂಬಯಿ-ಮಂಗಳೂರು ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸೆ.24ರಿಂದ ಪುನರಾರಂಭವಾಗಲಿದೆ.
ಮಂಗಳೂರು ಡಿಪೊದಿಂದ ಮಲ್ಟಿ ಆಕ್ಸಿಲ್ ವೊಲ್ವೊ ಬಸ್ ಮತ್ತು ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರ ಸೆ. 24ರಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಕಾರ ನಿಗದಿಪಡಿಸಿರುವ ನಿಯಮಾವಳಿಗಳ ಪ್ರಕಾರ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ನಾನ್ ಎಸಿ ಸ್ಲೀಪರ್ ಬಸ್ ಮಂಗಳೂರು ಡಿಪೊದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಬೆಳಗಾವಿ, ಪುಣೆ ಮಾರ್ಗವಾಗಿ ಮರುದಿನ ಬೆಳಗ್ಗೆ 7.30ಕ್ಕೆ ಮುಂಬಯಿ ತಲುಪುತ್ತದೆ.
ಮುಂಬಯಿಯಿಂದ ಮಧ್ಯಾಹ್ನ 12 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತದೆ. ನಾನ್ ಎಸಿ ಬಸ್ಸಿನ ಟಿಕೆಟ್ ದರ 1600 ರೂ. ಇದು ಮಂಗಳೂರು ಡಿಪೊ ಪ್ರಾರಂಭಿಸಿದ ಹೊಸ ರೂಟ್. ಇದರಿಂದ ಮುಂಬಯಿಯಲ್ಲಿರುವ ಕರಾವಳಿಯ ಕನ್ನಡಿಗರಿಗೆ ಬಹಳ ಪ್ರಯೋಜನವಾಗಲಿದೆ.
ಮಲ್ಟಿ ಆಕ್ಸಿಲ್ ವೊಲ್ವೊ ಬಸ್ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ಪಡುಬಿದ್ರಿ, ಕಾರ್ಕಳ, ನಿಟ್ಟೆ, ಬೆಳ್ಮಣ್ಣು, ಮಂಚಕಲ್,ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಬೆಳಗಾವಿ , ಪುಣೆ ಮಾರ್ಗವಾಗಿ ಮರುದಿನ ಬೆಳಗ್ಗೆ 7 ಗಂಟೆಗೆ ಮುಂಬಯಿ ತಲುಪುತ್ತದೆ. ಮುಂಬಯಿಯಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 7 ಗಂಟೆಗೆ ಮಂಗಳೂರು ತಲುಪುತ್ತದೆ. ಈ ಬಸ್ಸಿನ ಟಿಕೆಟ್ ದರ 1,800 ರೂ. www.ksrtc.in ವೆಬ್‌ಸೈಟಿನಲ್ಲಿ ಟಿಕೆಟ್ ಕಾದಿರಿಸಬಹುದು.





















