ಕಾರ್ಕಳ : ಶಾರದಾ ಮಹಿಳಾ ಮ೦ಡಲ ಅನ೦ತಶಯನ ಇದರ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ 620 ಅ೦ಕ ಪಡೆದ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿ ಯು.ಎಸ್. ಅದ್ವೈತ ಶರ್ಮಾ ಹಾಗೂ 7ನೇ ತರಗತಿ ಪರೀಕ್ಷೆಯಲ್ಲಿ 96.9% ಅಂಕ ಗಳಿಸಿ ಪೆರ್ವಾಜೆ ಶಾಲೆಗೆ ಪ್ರಥಮ ಸ್ಥಾನಿಯಾದ ಅವನೀ ಉಪಾಧ್ಯ ಬಿ. ಅವರನ್ನು ಸೆ.9ರಂದು ಗೌರವಿಸಲಾಯಿತು. ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ವಾರಿಜಾ ಕಾಮತ್ ಉಪಸ್ಥಿತರಿದ್ದರು. ಸಾವಿತ್ರಿ ಮನೋಹರ್ ಕಾರ್ಯಕ್ರಮ ನಿರೂಪಿಸಿ, ಹರ್ಷಾ ಕಾಮತ್ ವಂದಿಸಿದರು.
ಶಾರದಾ ಮಹಿಳಾ ಮಂಡಲ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ





















