ಹೆಬ್ರಿ : ನಿರಂತರ ಸಮಾಜಮುಖಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಶಾಂತಿನಿಕೇತನ ಹಾಗೂ ಚಾಣಕ್ಯ ಸಂಸ್ಥೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ಮಾಡುತ್ತಿರುವುದು ಮಾದರಿ ಕಾರ್ಯವೆಂದು ಶಿವಪುರ ಸರಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಸೆ. 5ರಂದು ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವತಿಯಿಂದ ಹೆಬ್ರಿ ಚಾಣಕ್ಯ ಎಜ್ಯುಕೇಶನ್ ಅಕಾಡಮಿ ಸಹಯೋಗದೊಂದಿಗೆ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾ ಸ್ವೀಕರಿಸಿ ಮಾತನಾಡಿದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೇ ವೀಣಾ ಯು. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಗುರು ಹಿರಿಯರಿಗೆ ಗೌರವ ಕೊಡಬೇಕು. ಆಗ ಮಾತ್ರ ಶಿಕ್ಷಣ ಹಾಗೂ ಕಲಿಸಿದ ಗುರುವಿನ ಶ್ರಮ ಸಾರ್ಥಕವಾಗುವುದು ಎಂದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನನ್ನ ಮೆಚ್ಚಿನ ಗುರುಗಳು ಕುರಿತ ಲೇಖನ ವಿಜೇತರಿಗೆ ಬಹುಮಾನ
ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಂತಿನಿಕೇತನ ಸಂಘದ ಸದಸ್ಯರಿಗೆ ಏರ್ಪಡಿಸಿದ ನನ್ನ ನೆಚ್ಚಿನ ಗುರುಗಳು ಲೇಖನ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ವಯಸ್ಕರ ವಿಭಾದಲ್ಲಿ ರೆಷ್ಮಾ ಕಡ್ತಲ, ರಶ್ಮಿ, ಮಕ್ಕಳ ವಿಭಾಗದಲ್ಲಿ ಸೌಜನ್ಯ, ಚೇತನ್ ಬಹುಮಾನ ಪಡೆದರು. ರಾಜೇಶ್ ಸ್ವಾಗತಿಸಿ, ವಿಷ್ಣುವರ್ಧನ್ ನಿರೂಪಿಸಿ, ನರೇಂದ್ರ.ಎಸ್. ವಂದಿಸಿದರು.
































