ಕಾರ್ಕಳ : ನಾರಾಯಣಗುರುಗಳ 166ನೇ ಜನ್ಮ ಜಯಂತಿಯಂಗವಾಗಿ ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದಲ್ಲಿ ಸೆ. 2ರಂದು ವಿಶೇಷ ಪೂಜೆ ಜರಗಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸದಾನಂದ ಶಾಂತಿ ನೇತೃತ್ವದಲ್ಲಿ ವೈದಿಕ ಕಾರ್ಯ ನೆರವೇರಿತು. ಕ್ಷೇತ್ರದ ಆಡಳಿತ ಮೊಕ್ತೇಸರರ ಭಾಸ್ಕರ್ ಎಸ್. ಕೋಟ್ಯಾನ್, ಕಾರ್ಕಳ ಬಿಲ್ಲವ ಸಂಘದ ಕಾರ್ಯದರ್ಶಿ ಪ್ರಭಾಕರ ಬಂಗೇರ ಹಾಗೂ ಸೇವಾದಳದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆನೆಕೆರೆ ಶ್ರೀಕೃಷ್ಣ ಕ್ಷೇತ್ರದಲ್ಲಿ ವಿಶೇಷ ಪೂಜೆ



















