ನೀಲಾವರ ಗೋಶಾಲೆಗೆ 1 ಲಕ್ಷ ರೂ. ದೇಣಿಗೆ

ಕಾರ್ಕಳ : ಅನಂತಪದ್ಮನಾಭ ಭಜಕ ವೃಂದದ ವತಿಯಿಂದ ನೀಲಾವರ ಗೋಶಾಲೆಗೆ1 ಲಕ್ಷ ರೂ. ದೇಣಿಗೆ ನೀಡಲಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಚೆಕ್‌ ಹಸ್ತಾಂತರಿಸಲಾಯಿತು. ಮೂಡಬಿದ್ರೆ ಎಂಸಿಸಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಭಟ್, ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ದೇಂದಬೆಟ್ಟು ಶ್ರೀರಾಮ ಭಟ್, ಪ್ರಶಾಂತ್ ಭಟ್, ವಿಜಯಕುಮಾರ್ ತಂತ್ರಿ, ಅನಂತಪದ್ಮನಾಭ ತಂತ್ರಿ, ವೈ. ಶಿವಪ್ರಸಾದ ಭಟ್ ಮತ್ತಿತರರು ಉಪಸ್ಥಿತರಿದ್ದರು.

a href="#" target="_blank">







































error: Content is protected !!
Scroll to Top