ನಿತ್ಯ ಭವಿಷ್ಯ -31-08-2020

ಮೇಷ

ಅಷ್ಟಮಾದಿಪತಿ ಕುಜ ಜನ್ಮದಲ್ಲಿ ಇರುವಾಗ  “ತನು ಸೌಖ್ಯ ವಿವರ್ಜಿತ: ” ಎನ್ನುವಂತೆ ದೇಹಕ್ಲೇಶ ಶಾಲಾ ರೂಪಹಾನಿ ಅಪವಾದಗಳೂ ಕಾಡುತ್ತವೆ. ಆದರೆ ಮೇಷ ರಾಶಿಯ ಕುಜ ಅಷ್ಟೊಂದು ದೋಷವನ್ನು ಕೊಡುವುದಿಲ್ಲ .ತೃತೀಯಾಧಿಪತಿ ಬುಧ ಷಷ್ಟದಲ್ಲಿಇರ್ವುದರಿಂದ “ಭ್ರಾತ್ರ್ ಶತ್ರುರ್ಮಹಾಧನಿ” ಎನ್ನುವಂತೆ ಸಹೋದರನಲ್ಲಿ  ಸೋದರಮಾವನಲ್ಲಿ ವಿರೋಧವಾಗುತ್ತದೆ ದ್ವಿತೀಯಾಧಿಪತಿ ಶುಕ್ರ ಸುಖ ಸ್ಟಾಂದಲ್ಲಿರುವುದರಿಂದ ಹಲವಾರು ರೀತಿಯಿಂದ ಧನಾಗಮನ ವಾಗಲಿದೆ.

ವೃಷಭ

ರವಿಗೆ ಚತುರ್ಥ ಸ್ಥಾನ ಶುಭವಲ್ಲ ವಿಸುಖ ಪೀಡಿತ ಮಾನಸಶ್ಚತುರ್ತೆ ಅಂದರೆ ರವಿ ನಿಮ್ಮನ್ನು ಅಸುಖಿಯನ್ನಾಗಿ ಪೀಡಿತ ಮನಸುಳ್ಳವನನ್ನಾಗಿ ಮಾಡುತ್ತಾನೆ. ವಾಹನರಹಿತನು ಆರೋಗ್ಯ ಸಮಸ್ಯೆ ಇರುವವನೂ ಆಗಿರುತ್ತೀರಿ.  ಈಶ್ವರ ದೇವರನ್ನು ಸ್ಮರಿಸುತ್ತಾ ಬನ್ನಿರಿ .  ನಿಮ್ಮ ಕಣ್ಣೆದುರೆ ನಡೆಯುವ  ಮೋಸ  ವಂಚನೆಗಳನ್ನು ಎದುರಿಸುವ ಧೈರ್ಯ ನಿಮಗೆ ಅಷ್ಟಮದ ಗುರು ಕೊಡಲಾರನು .ಭಾಗ್ಯದಲ್ಲಿ ಶನಿ ಇರುವುದರಿಂದ ಹಿರಿಯರೊಂದಿಗೆ ಹೊಂದಾಣಿಕೆಯೊಂದಿಗೆ ಹೋಗುವುದು ಒಳ್ಳೆಯದು .

ಮಿಥುನ

ರಾಹು ಜನ್ಮದಲ್ಲಿ ಇರುವುದರಿಂದ  ನಾಗ ದೇವರ ಮೂಲ ಮಂತ್ರ ಜಪಿಸಿರಿ. ದ್ವಿತೀಯದಲ್ಲಿ ಶುಕ್ರ ಇರುವುದರಿಂದ ಅನೇಕ ರೀತಿಯಿಂದ ಧನ ಲಾಭವಾಗಲಿದೆ. ಆದರೆ ಅವನು  ವ್ಯಯದ ಅಧಿಪತಿಯಾಗಿರುವುದರಿಂದ  ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ ಮಾಡಲಿದ್ದೀರಿ  .ಐಷಾರಾಮದ  ಜೀವನದಿಂದ  ದೈಹಿಕ ಪೀಡೆಗಳಿಗೆ ಒಳಗಾಗದಂತೆ ಜಾಗ್ರತೆ ವಹಿಸಿರಿ ಸಪ್ತಮದಲ್ಲಿ ಗುರು ಕೇತುವಿನೊಂದಿಗೆ ಇರುವುದರಿಂದ ಹಾಗೆಯೇ ಅಷ್ಟಮದಲ್ಲಿ ಶನಿ ಇರುವುದರಿಂದ ಮೂಳೆ ಎಲುಬುಗಳಿಗೆ ತೊಂದರೆ ಮಾಡಿಕೊಳ್ಳಬೇಡಿರಿ.

ಕರ್ಕಾಟಕ

ಜನ್ಮದಲ್ಲಿ ಶುಕ್ರ ಶುಭ ಫಲಗಳನ್ನು ನೀಡುತ್ತಾನೆ.ಸಾಂಸಾರಿಕ ಸುಖ ಸಂಗೀತದಲ್ಲಿ ಆಸಕ್ತಿ ಸುಖ ಮತ್ತು ಭೋಗ ಶುಕ್ರನ  ಪ್ರಧಾನ ಲಕ್ಷಣ .ರವಿಗೆ ದ್ವಿತೀಯ ಸ್ಥಾನ ಶುಭವಲ್ಲ ಮುಖ ಹಾಗೂ ಕಣ್ಣಿಗೆ ಸಂಬಂಧಪಟ್ಟ ವ್ಯಾಧಿಯಿಂದ ಪೀಡಿತರಾಗುವ ಸಾಧ್ಯತೆ .ಆದರೆ ಕರ್ಕಾಟಕ ರಾಶಿಯಿಂದ ದ್ವಿತೀಯವಾದುದರಿಂದ ಹೆಚ್ಚು ದೋಷವಿಲ್ಲ .ಶ್ರಮದಿಂದ ಹಾಗೂ ಕ್ಲೇಶದಿಂದ ಸಂಪತ್ತನ್ನು ನೀಡುವನು .ರಾಜಕೀಯ ಅಧಿಕಾರದಿಂದ ಧನ ಪ್ರಾಪ್ತಿಯಾಗುವುದು .

ಸಿಂಹ  

ನೀವು ಹುಟ್ಟು ಹೋರಾಟಗಾರರು .ನಿಮಗೆ  ಸ್ವಲ್ಪ ಕೋಪ ಜಾಸ್ತಿ .ಯಾರಿಗೂ ತಲೆಬಗ್ಗಿಸುವವರು ಅಲ್ಲ..ರವಿ ತನ್ನ ಮನೆಯಲ್ಲಿಯೇ ಈಗ ಇರುವುದರಿಂದ ಪ್ರಮುಖವಾದ ರಾಜಯೋಗಗಳು ಉಂಟಾಗಲಿವೆ .ರಾತ್ರಿಯಲ್ಲಿ ಕಣ್ಣು ಕಾಣದ ಸಮಸ್ಯೆ ಬರಬಹುದು. ಶನಿಯು ಸಪ್ತಮದಲ್ಲಿ ಇರುವುದು ವೈವಾಹಿಕ ಜೀವನಕ್ಕೆ ಶುಭವಲ್ಲ. ವಿವಾಹ ನಿಧಾನ.   ಅಷ್ಟಮಾಧಿಪತಿ  ಸಪ್ತಮದಲ್ಲಿ ಇರುವುದರಿಂದ  ಸತಿ ಪತಿ ಮೌನಾಚರಣೆಯಿಂದ ಅಂದರೆ ಸಂಯಮ ಸಹನೆ ತಾಳ್ಮೆ ಯಿಂದ ಇರಬೇಕು.ವಿಷ್ಣು ಸಹಸ್ರನಾಮ ಹೇಳಬೇಕು.

ಕನ್ಯಾ

ಗುರುವಿಗೆ ಸುಖ ಸ್ಥಾನ ಶುಭವಲ್ಲ ಅವನು ಬಂಧು ಕ್ಲೇಶವನ್ನು ನೀಡುತ್ತಾನೆ .ಅವನೊಂದಿಗೆ ಕೇತು ಇದ್ದಾನೆ. ಚತುರ್ಥಾಧಿಪತಿ ಚತುರ್ಥದಲ್ಲಿರಲು  “ವಿದ್ಯಾ ಗುಣ ವಿಭೂಷಿತ:”ಎಂದಿದ್ದಾರೆ ವಿದ್ಯಾವಂತನೂ ಗುಣವಂತನೂ ತಾಯಿಯ ಸುಖವುಳ್ಳವನೂ ಆಗುತ್ತೀರಿ .ಪಂಚಮದಲ್ಲಿ ಶನಿಯಿರಲು ಮಾನಸಿಕ ನೆಮ್ಮದಿಯ ಕೊರತೆ ಚಾರಿತ್ರ್ಯ ಹೀನಾ ಸಂತಾನ ಸುಖ ಹೀನನಾಗುತ್ತಾನೆ ಎಂದಿದ್ದಾರೆ , ನಿಮ್ಮ ನೆರೆಹೊರೆಯವರೊಂದಿಗೆ ಹೊಂದಿಕೊಂಡು ಹೋಗಿರಿ.

ತುಲಾ

ಬದಲಾವಣೆ ಜೀವನದ ನಿಯಮ. ಬದಲಾಗುತ್ತಿರುವ ಬಾಳಿನೊಂದಿಗೆ ಹೊಂದಿಕೊಂಡು ಹೋಗುವುದೇ ಜೀವನ ಧರ್ಮ. ಸುಖ ಸ್ಥಾನದಲ್ಲಿ ಶನಿ ಇದ್ದಾನೆ .ಅವನನ್ನು ಅರ್ಧಾಷ್ಟಮದ ಶನಿ ಎಂದೂ ಕರೆಯುತ್ತಾರೆ. ಚತುರ್ಥಾಧಿಪತಿ ಚತುರ್ಥದಲ್ಲಿ ಆದರೂ ಶನಿಯ ಗುಣವಾದ ಮನಶಾಂತಿ ಕಸಿದು ಕೊಳ್ಳುತ್ತಾನೆ ಕಲಹದಲ್ಲಿ ಪರಾಜಿತನೂ ಆಗುವಿರಿ. ವ್ಯವಹಾರದ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು.

ವೃಶ್ಚಿಕ

ಕೆಲವೊಮ್ಮೆ ಪರರಿಗೆ ಉಪಕಾರ ಮಾಡಲು ಹೋಗಿ ನೀವೇ ತೊಂದರೆಗೆ ಸಿಲುಕುವಿರಿ. ಜಾಗ್ರತೆ ಇರಲಿ ದ್ವಿತೀಯದ ಗುರು ಧನಾಗಮನಕ್ಕೆ ಯಾವುದೇ ಕೊರತೆಯನ್ನು ಮಾಡಲಾರ .ಅಷ್ಟಮದ ರಾಹುವಿಂದ ಅನೇಕ ದ್ವಂದ್ವಗಳು ನಿಮ್ಮೆದುರು ಬರಲಿವೆ. ನಿಮ್ಮನ್ನು ಬ್ರಾಂತರನ್ನಾಗಿ ಮಾಡಲಿವೆ. ಹಾಗೆಯೇ ಬಂದ ಹಣ ಕೇತುವಿನಿಂದಾಗಿ ವ್ಯರ್ಥ ಖರ್ಚು ಮಾಡಿಸುವಾಗ ನಿಮ್ಮ ಮನಸ್ಸು ಚಿಂತೆಗೇಡು ಆಗಲಿದೆ .ವಿಷ್ಣು ಸಹಸ್ರನಾಮ ಪಠಿಸಿರಿ .

ಧನು 

ದೈವವು ವಿಮುಖ  ವಿಧಿಯ ಕೋಪ ಕೆಲವೊಮ್ಮೆ ಕೈಲಾಗದ ಪರಿಸ್ಥಿತಿ ಸಾಡೇ ಸಾಥ್ ಶನಿಯ ಆಟ ವಿಕ್ರಮಾದಿತ್ಯ ರಾಜನನ್ನೇ ಬಿಡಲಿಲ್ಲ .ಮಾತಾಡುವಾಗ ಜಾಗ್ರತೆ. ಇನ್ನೊಬ್ಬರಿಗೆ ಮಾತು ಕೊಡುವಾಗ ಎಚ್ಚರಿಕೆ . ಹಣ ಯಾರಿಗೂ ಕೊಡಲೆ ಬೇಡಿ.ನೂತನ ಕಾರ್ಯಾರಂಭ ಉತ್ತಮವಲ್ಲ. ಧನಾಗಮನ  ಅಷ್ಟಕ್ಕಷ್ಟೆ .ವೃತ್ತಿರಂಗದಲ್ಲಿ ಕಲಹ ಪ್ರತಿನಿತ್ಯವೂ ನಿರೀಕ್ಷಿತ .ಹಿತ ಶತ್ರು ನಿಮ್ಮ ಬೆನ್ನಿಗೆ ಅಂಟಿಕೊಂಡೆ ಇರುತ್ತಾರೆ.

ಮಕರ

ಜನ್ಮದ ಶನಿಯನ್ನು ಸಾಡೇಸಾತ್ ಶನಿ ಎಂದು ಕರೆಯುತ್ತಾರೆ .ಆದರೆ ಒಂದು ವಿಶೇಷವೆಂದರೆ ಮಕರ ರಾಶಿಯ ಶನಿ ಅಷ್ಟೊಂದು ತೊಂದರೆ ಕೊಡದೆ ಶುಭ ಫಲವನ್ನೇ ನೀಡುತ್ತಾನೆ .ಗುರು ಕೇತುವಿನೊಂದಿಗೆ ವ್ಯಯದಲ್ಲಿ ಇದ್ದಾನೆ. ಧನ ವ್ಯಯ ಸತ್ಕರ್ಮಕ್ಕೆ ಇರುತ್ತದೆ. ಶಯನ ಸುಖದ ತೊಂದರೆ ಕಣ್ಣು ಮತ್ತು ಪಾದಗಳಲ್ಲಿ ವೇದನೆ ಇರುತ್ತದೆ .ಕಫ ಶೀತವಿರುತ್ತದೆ ಮಕ್ಕಳ ವಿಷಯದಲ್ಲಿ ಬೇಸರವಿರುತ್ತದೆ .

ಕುಂಭ

ತಂದೆ ಮಕ್ಕಳ ಮನೆ ಸಂಬಂಧಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿರುತ್ತದೆ. ಆದರೂ ಗುರು ಕೇತು ಲಾಭ ಸ್ಥಾನದಲ್ಲಿ ಇರುವುದರಿಂದ ಕೊಂಚ ನೆಮ್ಮದಿ, ಧನಾಗಮನವಿರುತ್ತದೆ. ಶನಿಯ ಕಾರಣದಿಂದಾಗಿ ವಾತ ಪ್ರವೃತ್ತಿ ಕಾಲು ಗಂಟು ನೋವು ಬರಲಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಯಶಸ್ಸು ದೊರಕಲಿದೆ .ವಾಹನ ಸಂಚಾರದಲ್ಲಿ ಬಹಳ ಜಾಗ್ರತೆ ವಹಿಸಬೇಕು.

ಮೀನ

ಮನೆಯಲ್ಲಿ ಮಂಗಳ ಕಾರ್ಯಗಳ ಮಾತುಕತೆ ಮುಂದುವರಿಯಲಿದೆ .ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿ ಮನಸ್ಸಿಗೆ ನೆಮ್ಮದಿ ಬರಲಿದೆ.  ಸುಖ ಸ್ಥಾನದ ರಾಹುವಿಗೆ  ನಾಗ ದೇವರ ಪ್ರಾರ್ಥನೆ ಮಾಡುತ್ತಾ ಬರಬೇಕು. ತಾಯಿಯವರ ಮನಸ್ಸಿಗೆ ಬೇಸರ ತರಬೇಡಿ.ವಿದೇಶ ಪ್ರಯಾಣ ಯೋಗವಿದೆ ಖರ್ಚು ವೆಚ್ಚಗಳಲ್ಲಿ ಬಹಳ ಜಾಗ್ರತೆ ಇರಲಿ    ಶನಿ ಉತ್ತಮ ಧನಾಗಮನವನ್ನು ಅದರಲ್ಲೂ ಕಬ್ಬಿಣ ವ್ಯಾಪಾರಿಗಳಿಗೆ ವಿಶೇಷ ಲಾಭ ಬರಲಿದೆ.

ಜ್ಯೋತಿಷ್ಯರು

ಕೆ. ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/ 80739 73603



































































































error: Content is protected !!
Scroll to Top