ಸುಶಾಂತ್ ಸಿಂಗ್ ರಜಪೂತ್‌ಗೆ ನ್ಯಾಯ ಸಿಗಬೇಕೆಂದು ಹೋರಾಡುತ್ತಿರುವ ಮತ್ತು ಸಿನೇಮಾ ಲೋಕದ ನೆಪೊಟಿಸಂ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಂಗನಾ ರಣಾವತ್ ಬಾಲಿವುಡ್‌ನ ಮಾದಕ ವಸ್ತು ಜಾಲದ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಕಳಂಕ ಅಂಟಿಕೊಂಡಿರುವಾಗಲೇ ಕಂಗನಾ ಬಾಲಿವುಡ್‌ನಲ್ಲಿ ಬಹುಕಾಲದಿಂದ ಇಡ್ರಗ್ಸ್ ಮಾಫಿಯಾ ಸಕ್ರಿಯವಾಗಿದೆ ಎಂಬ ಅಂಶವನ್ನು ತನ್ನದೇ ಅನುಭವವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.
ಸ್ವತಃ ನಾನೇ ಡ್ರಗ್ಸ್ ಮಾಫಿಯಾದ ಬಲಿಪಶುವಾಗಿದ್ದೆ. “ಚರಿತ್ರ ನಟ” ನೊಬ್ಬ ನನಗೆ ಡ್ರಗ್ಸ್ ತಿನ್ನಿಸಿದ್ದ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅದು ಕಂಗನಾ ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿದ್ದ ದಿನಗಳು. ನಗರದ ಓರ್ವ “ಆಂಟಿ”ಯ ಜೊತೆ ಕಂಗನಾ ಪೇಯಿಂಗ್ ಇದ್ದರು. ಈ ದಿನಗಳಲ್ಲಿ ಅವರಿಗೆ ತಂದೆ ವಯಸ್ಸಿನ ಈ ಚರಿತ್ರ ನಟನ ಸಂಪರ್ಕವಾಯಿತು. ಪಾತ್ರಗಳನ್ನು ದೊರಕಿಸಿಕೊಡಲು ಸಹಾಯ ಮಾಡುತ್ತೇನೆ ಎಂದು ನಂಬಿಸಿ ಹತ್ತಿರವಾದ ಆತ ಬಳಿಕ ಕಂಗನಾರ ಗಾಡ್‌ಫಾದರ್ ರೀತಿ ವರ್ತಿಸತೊಡಗಿದ. ಕೆಲ ಸಮಯದ ಬಳಿಕ ಈತನೇ ನಾನು ಕಂಗನಾ ಗಂಡ ಎಂದು ಕೂಡ ಹೇಳಿಕೊಂಡಿದ್ದ.


ಆಂಟಿಯ ಜೊತೆಗೆ ಜಗಳವಾಡಿ ಅವರನ್ನು ಮನೆ ಬಿಟ್ಟು ಹೋಗುವಂತೆ ಮಾಡಿದ. ಕಂಗನಾರನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ. ಮನೆಯಲ್ಲಿದ್ದ ಅವನ ನೌಕರರು ಕಂಗನಾ ಏನು ಮಾಡಿದರೂ ಆವನಿಗೆ ವರದಿ ಒಪ್ಪಿಸುತ್ತಿದ್ದರು. ಅದು ಕಂಗನಾ ಪಾಲಿಗೆ ಗೃಹ ಬಂಧನವೇ ಆಗಿತ್ತು.ಸಿನೇಮಾದವರ, ಸೆಲೆಬ್ರಿಟಿಗಳ ಪಾರ್ಟಿಗೆ ಆತ ಗನ್ನ ಜೊತೆಗೆ ಕಂಗನಾರನ್ನು ಕರೆದುಕೊಂಡು ಹೋಗುತ್ತಿದ್ದ.
ಇಂಥ ಒಂದು ಪಾರ್ಟಿಯಲ್ಲಿ ಪಾನೀಯ ಸೇವಿಸಿದ ಬಳಿಕ ಅಮಲು ಬಂದಂತಾಯಿತು. ಈ ಸಂದರ್ಭ ಬಳಸಿ ಅವನು ಕಂಗನಾರನ್ನು ದುರುಪಯೋಗಪಡಿಸಿಕೊಂಡಿದ್ದ. ಈ ಘಟನೆ ಸಂಭವಿಸಿದ ಒಂದು ವಾರದಲ್ಲೇ ಅವನು ನಾನೇ ಕಂಗನಾ ಪತಿ ಎಂದು ಸಾರಿಕೊಂಡ.ನೀನು ನನ್ನ ಬಾಯ್‌ಫ್ರೆಂಡ್ ಅಲ್ಲ ಎಂದು ಕಂಗನಾ ಪ್ರತಿಭಟಿಸಿದರೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದ.
ಮೊದಲ ಚಿತ್ರ ಗ್ಯಾಂಗಸ್ಟರ್ (2006) ಬಿಡುಗಡೆಯಾದ ಬಳಿಕವೂ ಅವನ ದೌರ್ಜನ್ಯ ಮುಂದುವರಿದಿತ್ತು.
ಅವನು ನನ್ನನ್ನ ಬಿಡಲು ತಯಾರಿರಲಿಲ್ಲ. ನಾನು ಶೂಟಿಂಗ್‌ಗೆ ಹೋಗಬಾರದೆಂದು ನನಗೆ ದಿನಾಲೂ ಅಮಲು ಬರುವ ಪದಾರ್ಥಗಳನ್ನು ತಿನ್ನಿಸುತ್ತಿದ್ದ. ಇದನ್ನೆಲ್ಲ ನಿರ್ದೇಶಕ ಅನುರಾಗ್ ಬಸು ಬಳಿ ಹೇಳಿಕೊಂಡಾಗ ಎಷ್ಟೋ ದಿನ ಅವರ ಕಚೇರಿಯಲ್ಲೇ ಉಳಿದುಕೊಳ್ಳಲು ಅವಕಾಶ ಕೊಟ್ಟರು ಎಂದು ಅಂದಿನ ದಿನಗಳನ್ನು ಕಂಗನಾ ನೆನಪಿಸಿಕೊಂಡಿದ್ದಾರೆ.































