5,000 ದಲಿತರಿಗೆ ಅರ್ಚಕ ತರಬೇತಿ ನೀಡಿದ ವಿಹಿಂಪ

ದಿಲ್ಲಿ, ಆ. 24:  ಸಮಾಜದಲ್ಲಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಪಿಡುಗನ್ನು ಕೊನೆಗೊಳಿಸುವ ಸಲುವಾಗಿ  ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಸುಮಾರು 5,000 ದಲಿತರಿಗೆ  ಅರ್ಚಕರಾಗಿ ತರಬೇತಿ  ನೀಡಿ ಅವರನ್ನು ವೈದಿಕ ಕಾರ್ಯಕ್ಕೆ ಸಜ್ಜುಗೊಳಿಸಿದೆ.  

      ಈ ಬಗ್ಗೆ ಮಾಹಿತಿ ನೀಡಿರುವ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ‌ವಿಎಚ್‌ಪಿಯ ಪ್ರಯತ್ನದಿಂದಾಗಿ ಇಂತಹ ಅನೇಕ ಪುರೋಹಿತರು ಸರ್ಕಾರ ನಡೆಸುತ್ತಿರುವ ದೇವಾಲಯಗಳ ಮಂಡಳಿಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

       ಈ ಕಾರ್ಯದಲ್ಲಿ ವಿಎಚ್‌ಪಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದೆ. ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ದಲಿತ ಪುರೋಹಿತರಿದ್ದಾರೆ. ತಮಿಳುನಾಡಿನಲ್ಲಿ 2,500 ಪುರೋಹಿತರಿಗೆ ತರಬೇತಿ ನೀಡಲಾಗಿದೆ. ಆಂಧ್ರಪ್ರದೇಶದಲ್ಲೂ ಹೆಚ್ಚಿನ ಸಂಖ್ಯೆಯ ದಲಿತ ಪುರೋಹಿತರಿದ್ದಾರೆ.

      ವಿಎಚ್‌ಪಿಯ ಎರಡು ಅಂಗಗಳು ಈ ಕಾರ್ಯದಲ್ಲಿ ಭಾಗಿಯಾಗಿವೆ, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ದಲಿತರಿಗೆ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸುವ ತರಬೇತಿಯನ್ನು ನೀಡಲಾಗಿದೆ.  ತರಬೇತಿಯ ಕೊನೆಯಲ್ಲಿ ಅವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ವಿವಿಧ ಧಾರ್ಮಿಕ ಸಮಾರಂಭಗಳು ಮತ್ತು ಆಚರಣೆಗಳನ್ನು ನಿರ್ವಹಿಸುವಲ್ಲಿ ಪ್ರವೀಣರಾದ ಪುರೋಹಿತರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಮಾಣಪತ್ರಗಳನ್ನು ನೀಡುತ್ತದೆ.

     ವಿಎಚ್‌ಪಿ ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ನಿರ್ಣಯವನ್ನು 1969ರಲ್ಲಿ ಉಡುಪಿಯಲ್ಲಿ ನಡೆದ  ಸಮಾವೇಶದಲ್ಲಿ ತೆಗೆದುಕೊಂಡಿದೆ.

































































error: Content is protected !!
Scroll to Top