ಕಾರ್ಕಳ, ಆ. 9- “ಉಂಡಾತಿ ಒಡತಿ ಉಳ್ಳಾಲ್ತಿ” ಎಂದೇ ಪ್ರಸಿದ್ದಿ ಪಡೆದಿರುವ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆ. 7 ರಂದು ಕೋರೋನಾ ಮಹಾಮಾರಿಯ ನಿಯಂತ್ರಣ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಮತ್ತು ಯಾಗ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾl ಎನ್. ಆರ್. ಶೆಟ್ಟಿ, ನಿಟ್ಟೆ ಯುನಿವರ್ಸಿಟಿಯ ಚಾನ್ಸಲರ್ ಎನ್. ವಿನಯ ಹೆಗ್ಡೆ, ಎನ್. ಎಮ್. ಅಡ್ಯಂತಾಯ ಮತ್ತು ಯೋಗೇಶ್ ಹೆಗ್ಡೆ ಉಪಸ್ಥಿತರಿದ್ದರು. ಬೆಳ್ಮಣ್ಣು ದೊಡ್ಡಮನೆ ಸರ್ವೇಶ ತಂತ್ರಿ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಸನ್ನ ಆಚಾರ್ಯ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಡಿಸೆಂಬರ್ ತಿಂಗಳ ಮಧ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಶತ ಚಂಡಿಕಾ ಯಾಗ ನೆರವೇರಲಿದ್ದು, ಶ್ರೀ ಕ್ಷೇತ್ರದ ಭಕ್ತರು ತನು ಮನದಿಂದ ಸಹಕರಿಸಬೇಕೆಂದು ಶ್ರೀ ಕ್ಷೇತ್ರದ ಭಕ್ತರಲ್ಲೋರ್ವರಾದ ಮುಂಬಯಿಯ ಉದ್ಯಮಿ ನಿಟ್ಟೆ ಪಾದೆಮನೆ ಸುಧಾಮ ಶೆಟ್ಟಿಯವರು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನಿಟ್ಟೆ: ಲೋಕ ಕಲ್ಯಾಣಾರ್ಥವಾಗಿ ಯಾಗ ಮತ್ತು ಪೂಜೆ
