ಕಾರ್ಕಳ: ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ fb, Instagram ಯಶೋದಾ ಕೃಷ್ಣ ಸ್ಪರ್ಧೆ ನಡೆಯಲಿದೆ. 5 ವರ್ಷದೊಳಗಿನ ಮಗುವಿನೊಂದಿಗೆ ಯಶೋದೆಯಿರುವ ಫೋಟೋ ವನ್ನು ಆ. 11ರೊಳಗಾಗಿ ಸ್ಪರ್ಧಾಳುಗಳು 7892038011 ವ್ಯಾಟ್ಪಪ್ ನಂಬರ್‌ಗೆ ಕಳುಹಿಸಿಕೊಡಬೇಕು. ವ್ಯಾಟ್ಸಪ್‌ನಲ್ಲಿ ಬಂದ ಫೋಟೋವನ್ನು ಆನ್ಸ್ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಅತಿ ಹೆಚ್ಚು ಲೈಕ್ ಬಂದ ಫೋಟೋವನ್ನು ವಿನ್ನರ್ ಎಂದು ಪರಿಗಣಿಸಲಾಗುವುದು. ಮಗುವಿನ ಜೊತೆ ಯಶೋದೆಯಾಗಿ ಮಗುವಿನ ತಾಯಿಯೇ ಆಗಬೇಕೆಂದೇನು ಇಲ್ಲವೆಂದು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.