ಕಾರ್ಕಳ ವಕೀಲರ ಸಂಘದಿಂದ ಸನ್ಮಾನ, ಬೀಳ್ಕೊಡುಗೆ

ಕಾರ್ಕಳ, ಆ. 8: ಉಡುಪಿ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್‌ ನ್ಯಾಯಾಧೀಶರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಇದೀಗ ಬೆಳಗಾವಿ ಜಿಲ್ಲಾ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿರುವ ಸಿ.ಎಂ. ಜೋಶಿಯವರನ್ನು ಇಂದು ಕಾರ್ಕಳ ತಾಲೂಕು  ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸನತ್‌ ಕುಮಾರ್‌ ಜೈನ್, ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್‌ ಜೈನ್‌ ಮತ್ತು ಇತರ ಪದಾಧಿಕಾರಿಗಳಾದ ಅರುಣ್‌ ಕುಮಾರ್‌ ಶೆಟ್ಟಿ, ಪಿ.ಸುಗಂಧ ಕುಮಾರ್‌, ಜಿ. ಮುರಳೀಧರ ಭಟ್‌, ಶ್ರೀರಮಣ ಆಚಾರ್‌, ದಯಾನಂದ  ನಾಯಕ್‌, ನಾಗೇಶ್‌ ಪೈ ಮತ್ತು ಸತೀಶ್ ಕುಮಾರ್‌ ಉಪಸ್ಥಿತರಿದ್ದರು.error: Content is protected !!
Scroll to Top