ಮಡಿಕೇರಿ, ಆ. 8: ಕೊಡಗಿನಲ್ಲಿ ಸುರಿದ ಝಾರಿ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ ನಾಪತ್ತೆಯಾಗಿದ್ದ ಅರ್ಚಕರ ಕುಟುಂಬದ ನಾಲ್ವರ ಪೈಕಿ ಒಬ್ಬರ ಮೃತದೇಹ ಸ್ಥಳದಲ್ಲಿ ಪತ್ತೆಯಾಗಿದೆ.
ಭಾರೀ ಮಳೆ ನಡುವೇ ಎನ್.ಡಿ.ಆರ್.ಎಫ್. ಸಿಬಂದಿಗಳು ಕಾಯಾ೯ಚರಣೆ ನಡೆಸುತ್ತಿದ್ದಾರೆ. ಅಚ೯ಕರ ಕುಟುಂಬದ ಉಳಿದವರಿಗಾಗಿ ಶೋಧ ಕಾಯ೯ ಮುಂದುವರಿದಿದೆ.
ಆ.6ರಂದು ಭೂ ಕುಸಿತವಾಗಿ ತಲ ಕಾವೇರಿಯ ಅರ್ಚಕ ಟಿ.ಎಸ್.ನಾರಾಯಣಾಚಾರ್ಯ , ಅವರ ಪತ್ನಿ ಮತ್ತು ಇಬ್ಬರು ಅರ್ಚಕರು ಮೂರು ದಿನಗಳಿಂದ ಮಣ್ಣಿನ ರಾಶಿಯಡಿ ಸಿಲುಕಿದ್ದಾರೆ. ಈ ಪೈಕಿ ಒಬ್ಬರ ಮೃತದೇಹ ಸಿಕ್ಕಿದೆ.ಅವರನ್ನು ನಾರಾಯಾಣಾಚಾರ್ ಸಹೋದರ ಆನಂದತೀರ್ಥ ಎಂದು ಗುರುತಿಸಲಾಗಿದೆ.