ಮೇಷ
ನಿಮ್ಮ ಜನ್ಮದಲ್ಲಿರುವ ಕುಜ ಸದಾ ಎಲ್ಲರಲ್ಲಿಯೂ ತರ್ಕ- ವಾದ ವಿವಾದ ಮಾಡುವಂತೆ ಮಾಡಲಿದ್ದಾನೆ .ಮೂಗಿನ ತುದಿಯಲ್ಲಿ ಕೋಪ ನೆಲೆಸಿರುತ್ತದೆ .ನಿಮ್ಮ ಅತಿ ಬುದ್ಧಿವಂತಿಕೆ ಗೊಂದಲಕ್ಕೆ ಕಾರಣವಾಗಲಿದೆ .ಮನೆಯ ವಾತಾವರಣ ಉತ್ತಮವಾಗಲಿದೆ . ಕೃಷ್ಣ ದೇವರನ್ನು ಪೂಜಿಸಿರಿ .
ವೃಷಭ
ಹಿರಿಯರನ್ನು ಗೌರವಿಸಿರಿ .ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ .ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಿರಿ .
ಮಿಥುನ
ಆಯ-ವ್ಯಯ ಸಮವಾಗಿರುತ್ತದೆ . ದೇವರು ನಮಗೆ ಕೆಲವನ್ನು ಕೊಟ್ಟು ಕೆಲವನ್ನು ಕಿತ್ತುಕೊಂಡಿರುತ್ತಾನೆ .ಮಂಗಳ ಕಾರ್ಯಗಳು ನೆರವೇರಲಿವೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸಬೇಡಿ .
ಕರ್ಕಾಟಕ
ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗಲಿದ್ದಾರೆ .ಬರುತ್ತಿರುವ ಆದಾಯ ತೃಪ್ತಿಕರವಾಗಿರುತ್ತದೆ. ದೈವಾನುಗ್ರಹ ತೃಪ್ತಿಕರ ವಾಗಿರುತ್ತದೆ . ನೌಕರರು ಉದ್ಯೋಗ ಬದಲಾವಣೆ ಮಾಡಿಕೊಳ್ಳಲಿದ್ದಾರೆ .
ಸಿಂಹ
ನಿಮ್ಮ ಖರ್ಚುವೆಚ್ಚಗಳು ನಿಮ್ಮ ಹತೋಟಿಯಲ್ಲಿರಲಿ .ಸಾಲ ಮಾಡಬೇಡಿ , ಕೊಡಬೇಡಿ. ಭೂಮಿ -ವ್ಯಾಜ್ಯಗಳು ಕೋರ್ಟು ಮೆಟ್ಟಲೇರಲಿದೆ.ಎಷ್ಟೇ ಆದಾಯವಿದ್ದರು ನೀವು ಮಾಡುವ ಖರ್ಚಿಗೆ ಸಮವಾಗಿರುವುದಿಲ್ಲ.
ಕನ್ಯಾ
ನೀವು ಮಾಡುವ ವ್ಯವಹಾರಗಳೆಲ್ಲವು ನಿಧಾನಗತಿಯಲ್ಲಿಯೇ ಸಾಗುತ್ತಿರುತ್ತವೆ . ಸುಖ ಸ್ಥಾನದಲ್ಲಿರುವ ಕೇತು ಮಾನಸಿಕ ಚಿಂತೆಯನ್ನು ತರುತ್ತಿರುತ್ತಾನೆ .ನೌಕರಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ,ಎಚ್ಚರವಿರಲಿ .
ತುಲಾ
ಶನಿ ಸುಖ ಸ್ಥಾನದಲ್ಲಿದ್ದುಕೊಂಡು ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಚಿಂತೆಗೀಡು ಮಾಡಲಿದ್ದಾನೆ .ಪಿತ್ರಾರ್ಜಿತ ಆಸ್ತಿ ಕಲಹ ಕೋರ್ಟು ಮೆಟ್ಟಲೇರುವಂತೆ ಮಾಡಲಿದ್ದಾನೆ .
ವೃಶ್ಚಿಕ
ನಿಮ್ಮ ನಿಷ್ಟುರದ ಮಾತುಗಳೇ ನಿಮಗೆ ವೈರಿಗಳಾಗಿ ಕಾಡಲಿವೆ. ಸಹೋದರ ವರ್ಗದವರ ಸಹಕಾರ ನಿಮಗೆ ಒದಗಿ ಬರಲಿದೆ. ಜೊತೆಗೆ ಅನಿರೀಕ್ಷಿತ ವ್ಯರ್ಥ ಖರ್ಚುಗಳು ಬರಲಿವೆ .ಭೂಮಿ ವ್ಯವಹಾರ ಲಾಭ ತರಲಿದೆ .
ಧನು
ಪ್ರತಿಯೊಂದು ವ್ಯವಹಾರದಲ್ಲಿಯೂ ಗೊಂದಲವಿರುತ್ತದೆ .ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಿರಾಸಕ್ತಿ ಬರಲಿದೆ .ಕುಟುಂಬದಲ್ಲಿಯೂ ಕಲಹ, ವಿರಸ ಮೂಡಿಬರಲಿದೆ . ಭಾಗ್ಯಸ್ಥಾನದಲ್ಲಿ ರವಿ ಬುಧ ಇರುವುದರಿಂದ ಬೇಸರಿಸುವ ಅಗತ್ಯವಿಲ್ಲ .
ಮಕರ
ದೈಹಿಕವಾಗಿ ,ಮಾನಸಿಕವಾಗಿ ಬೇಸರ ಪಡುವ ದಿನಗಳು. ಯಾವುದರಲ್ಲಿಯೂ ಆಸಕ್ತಿ ಇರದೆ ಸಿಟ್ಟು ಮೂಗಿನ ತುದಿಯಲ್ಲಿಯೇ ಇರುತ್ತದೆ .ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲು ನೀರು ಎಂಬಂತೆ ನಿಮಗೆ ಅನಿಸಲಿದೆ . ಇದಕ್ಕೆಲ್ಲ ಕಾರಣ ಶನೀಶ್ವರನೇ ಕಾರಣ ನಾಗಿದ್ದಾನೆ .ಭೂಮಿ ವ್ಯಾಜ್ಯ ಗಳು ಏರ್ಪಡಲಿದೆ .
ಕುಂಭ
ನಿಮ್ಮಲ್ಲಿ ಯಾವುದೇ ವಿಚಾರಗಳಲ್ಲಿ ಸರಿಯಾದ ನಿರ್ಧಾರಗಳಿಲ್ಲ.ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಈ ವೈರಸ್ ಕಾಯಿಲೆ ಬಗ್ಗೆ ಎಚ್ಚರವಿರಲಿ .ಹಣದ ಒಳ ಹರಿವು ಕಡಿಮೆಯಾಗುತ್ತಲೇ ಇದೆ. ವ್ಯವಹಾರಗಳೆಲ್ಲ ನಿಂತು ಹೋಗುವ ಭಯ ನಿಮ್ಮನ್ನು ಕಾಡಲಿದೆ. ಗುರುಕೇತು ಏಕಾದಶ ಸ್ಥಾನದಲ್ಲಿರುವುದರಿಂದ ಭಯಪಡುವ ಅಗತ್ಯವಿಲ್ಲ .
ಮೀನ
ಈ ವರೆಗೆ ನಿಮ್ಮಲ್ಲಿದ್ದ ವರ್ಚಸ್ಸು, ಹುಮ್ಮಸ್ಸು ಕುಂದುತ್ತಿದೆ. ಹಿತಶತ್ರುಗಳು ನಿಮ್ಮ ಸುತ್ತಲೂ ನವಗ್ರಹರಂತೆ ಸುತುತ್ತಲೇ ಇರುತ್ತಾರೆ .ವಿದ್ಯಾರ್ಥಿಗಳು ಓದುವುದರಲ್ಲಿಹಿಂದೆ ಬೀಳಲಿದ್ದಾರೆ.
ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
97414 89529