ತಿರುವನಂತಪುರಂ: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕೋಳಿಕ್ಕೊಡ್ ವಿಮಾನ ನಿಲ್ದಾಣ ರನ್ವೇನಲ್ಲಿ ಸ್ಕಿಡ್ ಆಗಿ, ದುರಂತ ಸಂಭವಿಸಿದೆ. ಶುಕ್ರವಾರ ರಾತ್ರಿ 7.50ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾವಳಿಯ ಮೊದಲ ದೃಶ್ಯಗಳಲ್ಲಿ ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ. ಸದ್ಯದ ಮಾಹಿತಿ ಪ್ರಕಾರ ಅನೇಕ ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ಆಂಬುಲೆನ್ಸ್ಗಳು ಬೀಡುಬಿಟ್ಟಿವೆ. ಇನ್ನು ವಿಮಾನಕ್ಕೆ ಬೆಂಕಿ ತಗುಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊಯಿಕ್ಕೋಡು: 191 ಪ್ರಯಾಣಿಕರಿದ್ದ ವಿಮಾನ ದುರಂತ
