ವಿಮಾನ ದುರಂತ : ಸಾವಿನ ಸಂಖ್ಯೆ 20ಕ್ಕೇರಿಕೆ  

ಕೋಯಿಕ್ಕೊಡ್‌, ಆ.8: ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಏರ್‌ ಇಂಡಿಯಾ ವಿಮಾನ ರನ್‌ ವೇಯಿಂದ ಜಾರಿ ಉರುಳಿಬಿದ್ದ ಸಂಭವಿಸಿದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ವಿಮಾನದಲ್ಲಿದ್ದ ಅನೇಕ ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.ಮೃತಪಟ್ಟವರಲ್ಲಿ ವಿಮಾನದ ಇಬ್ಬರು ಪೈಲಟ್‌ ಗಳು ಸೇರಿದ್ದಾರೆ.

ಮಿಶನ್‌ ವಂದೇ ಭಾರತ ಅಭಿಯಾನದಡಿ ದುಬಾಯಿ  ದೇಶದಿಂದ ಭಾರತೀಯರನ್ನು ಕರೆ ತಂದ ವಿಮಾನ ಭಾರಿ ಮಳೆ ಪರಿಣಾಮವಾಗಿ  ಲ್ಯಾಂಡಿಂಗ್‌ ಆಗುವ ಎರಡನೇ ಪ್ರಯತ್ನದಲ್ಲಿ ಟೇಬಲ್‌ ಟಾಪ್‌ ರನ್‌ ವೇಯಿಂದ ಜಾರಿ ಹೋಗಿತ್ತು. ವಿಮಾನದಲ್ಲಿ ಸಿಬಂದಿ ಸೇರಿ 190 ಪ್ರಯಾಣಿಕರಿದ್ದರು.

ನಿನ್ನೆ ರಾತ್ರಿಯಿಂದೀಚೆಗೆ ಏನೇನೆಲ್ಲ ಆಯಿತು ಎಂಬ  ಮಾಹಿತಿ ಇಲ್ಲಿದೆ :

-ಶುಕ್ರವಾರ ರಾತ್ರಿ 7.41ಕ್ಕೆ ವಿಮಾನ ಲ್ಯಾಂಡಿಂಗ್‌ ಆಗುವ ಎರಡನೇ ಪ್ರಯತ್ನದಲ್ಲಿ ರನ್‌ ವೇಯಿಂದ ಜಾರಿ 35 ಅಡಿ ಆಳದ ಕಮರಿಗೆ ಉರುಳಿತು.

-ಆಗ ಗೋಚರತೆ 2000 ಮೀಟರ್‌ ಮಾತ್ರ ಇತ್ತು ಮತ್ತು ವಿಮಾನ ಪೂರ್ತಿ  ವೇಗದಲ್ಲಿತ್ತು. ಧಾರಾಕಾರ ಮಳೆಯಿದ್ದ ಕಾರಣ  ಪೈಲಟ್‌ ಗಳಿಗೆ ರನ್‌ ವೇ ಸರಿಯಾಗಿ ಕಾಣಿಸಿದಿರಬಹುದು ಎಂದು ಅನುಮಾನಿಸಲಾಗಿದೆ. ಟೇಬಲ್‌ ಟಾಪ್‌ ರನ್‌ ವೇಯ ತುದಿಯ ತನಕ ಹೋಗಿ ವಿಮಾನ ಕೆಳಗುರುಳಿತು.

ಪೈಲಟ್‌  ದೀಪಕ್‌ ಸಾಠೆ ಮತ್ತು ಸಹ ಪೈಲಟ್‌ ಅಖಿಲೇಶ್‌ ಕುಮಾರ್‌  ಮೃತಪಟ್ಟವರಲ್ಲಿ ಸೇರಿದ್ದಾರೆ.

– 10 ಶಿಶುಗಳ ಸಹಿತ 184 ಪ್ರಯಾಣಿಕರು, ಇಬ್ಬರು ಪೈಲಟ್‌ ಗಳು ಮತ್ತು ನಾಲ್ವರು ಗಗನಸಖಿಯರಿದ್ದರು.

error: Content is protected !!
Scroll to Top