ಇಡುಕ್ಕಿ, ಆ. 8: ಜಿಲ್ಲೆಯ ಮುನ್ನಾರ್ ನ ಪೆಟ್ಟಿಮುಡಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತಕ್ಕೆ ಬಲಿಯಾದವರ ಸಂಖ್ಯೆ 22 ಕ್ಕೇರಿದೆ.
12 ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಲಾಗಿದೆ. ಇನ್ನೂ 44 ಮಂದಿ ಮಣ್ಣಿನ ರಾಶಿಯಡಿಯಲ್ಲಿದ್ದು, ಭಾರಿ ಮಳೆಯ ನಡುವೆಯೇ ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ.
ಪೆಟ್ಟಿಮುಡಿಯ ಚಹಾ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮೃತ ದುರ್ದೈವಿಗಳು. ಶುಕ್ರವಾರ ಮಂಜಾನೆ ಬೃಹತ್ ಬೆಟ್ಟ ಕುಸಿದು ಬೆಟ್ಟದ ಕೆಳಗಿದ್ದ ಕಾರ್ಮಿಕರ ಸಾಲು ಮನೆಗಳು ಮಣ್ಣಿನಡಿ ಸೇರಿ ಹೋಗಿವೆ.