ವರದಿ : ಏಳಿಂಜೆ ನಾಗೇಶ್,ಮುಂಬಯಿ
ಮುಂಬಯಿ, ಆ. 4 : ಸಾಮಾನ್ಯವಾಗಿ ಹಿಂದೂ ದೇವರುಗಳಿಗೆ ಗಡ್ಡ ಮೀಸೆ ಇಲ್ಲದೆ ಚಿತ್ರಿಸುತ್ತೇವೆ.ನಮ್ಮ ಕಲ್ಪನೆಯಲ್ಲಿ ಅವರಿಗೆ ಮೀಸೆ ಇರುವುದಿಲ್ಲ. ಚೆನ್ನಾಗಿ ಕಾಣಲಿ,ಸೌಮ್ಯವಾಗಿರಲಿ ಎಂಬ ಕಾರಣಕ್ಕೋ ಏನೋ ನಾವು ರಾಮ,ಕೃಷ್ಣ ರನ್ನು ಗಡ್ಡಮೀಸೆ ರಹಿತವಾಗಿ ಇಟ್ಟಿದ್ದೇವೆ ಬ್ರಹ್ಮದೇವ ಮತ್ತು ಕೆಲವೆಡೆ ಶಿವನನ್ನು ಗಡ್ಡಮೀಸೆಯಲ್ಲಿ ತೋರಿಸಲಾಗಿದೆ.
ನಾಳೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ಅದ್ಧೂರಿಯಾಗಿ ನಡೆಯಲಿದೆ.ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.ಈ ಮಧ್ಯೆ ಹೊಸ ಕ್ಯಾತೆ ಒಂದು ಆರಂಭವಾಗಿದೆ.ಅಯೋಧ್ಯೆಯ ರಾಮನಿಗೆ ಮೀಸೆ ಬೇಕು.
ವಿಚಿತ್ರ ಎಂದು ಕಾಣುತ್ತಿದೆಯೇ? ಹೌದು, ಮಹಾರಾಷ್ಟ್ರದ ಹಿಂದುತ್ವವಾದಿ ನಾಯಕ ಸಂಭಾಜಿ ಭಿಡೆ ಎನ್ನುವವರು ಈ ಬೇಡಿಕೆಯನ್ನಿಟ್ಟಿದ್ದಾರೆ.
” ಮೀಸೆಯಿಲ್ಲದ ರಾಮನ ಮಂದಿರಕ್ಕೆ ಭೇಟಿ ನೀಡುವುದು ನನ್ನಂಥಹ ಭಕ್ತರಿಗೆ ಆಗದ ಮಾತು. ರಾಮ -ಲಕ್ಷ್ಮಣ, ಕೃಷ್ಣರು ಪುರುಷ ದೇವರು.ಮೀಸೆ ಪುರುಷಾರ್ಥದ ಲಕ್ಷಣ. ಹಿಂದಿನ ಕಲಾವಿದರ ಜ್ಞಾನದ ಕೊರತೆಯಿಂದಾಗಿ ಮೀಸೆ ಮಾಯವಾಗಿತ್ತು.ಈಗ ಮೀಸೆ ಇರುವ ರಾಮನ ಮೂರ್ತಿ ತಯಾರಿಸಬೇಕು ಎಂಬುದು ಅವರ ವಾದ.ಸ್ವತಃ ಅವರು ಮುಖ ತುಂಬಾ ಮೀಸೆ ಹೊತ್ತುಕೊಂಡಿದ್ದಾರೆ.ಅವರ ಬೇಡಿಕೆ ಈಡೇರದು ಅದು ಬೇರೆ ವಿಚಾರ.