ದಿಲ್ಲಿ, ಆ. 3 : ಮೂರನೇ ಹಂತದ ಲಾಕ್‌ಡೌನ್ ನಲ್ಲಿ ಆ.5 ರಿಂದ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಕೆಂದ್ರ ಸರಕಾರ ಅನುಮತಿ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ ಆರು ಅಡಿಯ ಅಂತರ ಪಾಲನೆ ಕಡ್ಡಾಯ. ಮಾಸ್ಕ್ ಬದಲಾಗಿ ವೈಸರ್ ಬಳಸಲು ಸಚಿವಾಲಯ ಸಲಹೆ ಮಾಡಿದೆ. ಇತರೆಲ್ಲ ಕೊರೊನಾ ನಿಯಮಗಳು ಜಿಮ್ ಮತ್ತು ಯೋಗ ಕೇಂದ್ರಗಳಿಗೂ ಅನ್ವಯಿಸುತ್ತವೆ.
ಸ್ಪಾ, ಸ್ಟೀಮ್ ಬಾತ್ ಮತ್ತು ಈಜುಕೊಳ ತೆರೆಯಲು ಇನ್ನೂ ಅನುಮತಿ ನೀಡಲಾಗಿಲ್ಲ. ಜಿಮ್ ಗಳಲ್ಲಿ ವ್ಯಾಯಾಮ ಮಾಡುವಾಗ ಮತ್ತು ಯೋಗ ಮಾಡುವಾಗ ಎನ್ 95 ಮಾಸ್ಕ್ ಧರಿಸಿದರೆ ಉಸಿರಾಟಕ್ಕೆ ಕಷ್ಟವಾಗುವುದರಿಂದ ವೈಸರ್ ಧರಿಸಲು ಸಲಹೆ ಮಾಡಲಾಗಿದೆ.