ಕೊರೊನಾಕ್ಕೆ ತಾಯಿ ಮತ್ತು ಐವರು ಮಕ್ಕಳು ಬಲಿ

ಧನಬಾದ್‌ : ಮಾರಕ ಕೊರೊನಾ ವೈರಸ್ಗೆ ಒ<ದೇ ಕುಟುಂಬದ ಆರು  ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡ್ನ ಧನಬಾದ್‌ ಜಿಲ್ಲೆಯ ಕತ್ರಾಸ್‌ ಎಂಬಲ್ಲಿ ಸಂಭವಿಸಿದೆ.

88 ವರ್ಷದ ತಾಯಿ ಮತ್ತು ಆಕೆಯ ಐವರು ಗಂಡು ಮಕ್ಕಳು ಮೃತ ದುರ್ದೈವಿಗಳು. ಜು.4 ರಿಂದ 20ರ ನಡುವೆ ಬರೀ 16 ದಿನಗಳ ಅಂತರದಲ್ಲಿ ಆರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.

ವೃದ್ಧ ಮಹಿಳೆ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ದಿಲ್ಲಿಯಿಂದ ಧನಬಾದ್ ಗೆ ಬಂದಿದ್ದರು. ಅಸ್ವಸ್ಥರಾದ ಅವರನ್ನು ಬೊಕಾರೊದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಲ್ಲಿಯೇ ಅವರು ಕೊನೆಯುಸಿರೆಳೆದರು. ಕೊರೊನಾ ಲಕ್ಷಣಗಳು ಇರದಿದ್ದ ಕಾರಣ ವೃದ್ಧಾಪ್ಯದಿಂದ ಬರುವ ಕಾಯಿಲೆಯಿಂದ ಸಾವನ್ನಪ್ಪಿರಬೇಕೆಂದು ಭಾವಿಸಲಾಗಿತ್ತು.

ಐವರು ಗಂಡು ಮಕ್ಕಳ ಸೇರಿ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಯಾರಿಗೂ ಮಹಿಳೆ ಕೊರೊನಾ ವೈರಸ್‌ ಸೋಂಕಿಗೆ ಗುರಿಯಾಗಿರಬಹುದು ಎಂಬ ಚಿಕ್ಕದೊಂದು ಅನುಮಾನವೂ ಇರಲಿಲ್ಲ.

ಆದರೆ ಸಾವಿನ ಬಳಿಕ ಮಹಿಳೆಗೆ ಕೊರೊನಾ ಪೊಸಿಟಿವ್‌ ಇರುವ ವರದಿ ಬಂತು. ವರದಿ ಬರುವಷ್ಟರಲ್ಲಿ ಆಕೆಯ ಐವರು ಮಕ್ಕಳಿಗೂ ಕೊರೊನಾ ತಗಲಿಯಾಗಿತ್ತು. 60-70 ವರ್ಷದ ಈ ಸಹೋದರರು ಒಬ್ಬರ ಬಳಿಕ ಒಬ್ಬರಂತೆ ಸಾವನ್ನಪ್ಪಿದರು. ಇದೀಗ ಈ ಕುಟುಂಬದಲ್ಲಿ ಓರ್ವ ಮಗ ಮಾತ್ರ ಉಳಿದುಕೊಂಡಿದ್ದಾರೆ. ಅವರು ದಿಲ್ಲಿಯಲ್ಲಿದ್ದಾರೆ.error: Content is protected !!
Scroll to Top