ಜೈಪುರ : ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ನಯಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡೆದ್ದಿರುವ ಶಾಸಕರ ವಿರುದ್ಧ ಜು. 24ರ ತನಕ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಬಂಡೆದ್ದಿರುವ ತಮ್ಮನ್ನು ಅಮಾನತುಗೊಳಿಸಿದ ಸ್ಪೀಕರ್ ಕ್ರಮವನ್ನು ಶಾಸಕರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ನ್ಯಾಯಾಲಯದ ಅದೇಶದಿಂದಾಗಿ ಸಚಿನ್ ಪೈಲಟ್ ಗುಂಪು ಸದ್ಯ ನಿರಾಳವಾಗಿದೆ. ರಾಜಸ್ಥಾನದ ನಾಟಕೀಯ ಬೆಳವಣಿಗೆಗಳು ಮತ್ತೆ ಸ್ಯೀಕರ್ ಅಧಿಕಾರದ ಚರ್ಚೆಗೆ ಕಾರಣವಾಗಿದೆ.