ಮುಂಬಯಿ : ಅಭಿಷೇಕ್ ಮತ್ತು ಮೀರಾ ಕುಲಕರ್ಣಿ 8 ವರ್ಷ ಪ್ರೀತಿಸಿ ಈ ವರ್ಷ ಮದುವೆಯಾಗಲು ತೀರ್ಮಾನಿಸಿದರು. ಅದರಂತೆ ಕಳೆದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥವೂ ಆಯಿತು. ಆದರೆ ಮದುವೆಗೆ ಮಾತ್ರ ಕೊರೊನಾ ಅಡ್ಡಿಯಾಯಿತು. ಕೊನೆಗೂ ಜೂನ್ 25 ರ<ದು ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಸರಳವಾಗಿ ಅವರ ಮದುವೆ ನೆರವೇರಿತು.ಇಲ್ಲಿಯ ತನಕ ಇದು ಒಂದು ಮಾಮೂಲು ಕತೆ. ನಿಜವಾದ ಕತೆ ಪ್ರಾರಂಭವಾಗುವುದು ನಂತರ ಏನಾಯಿತು ಎನ್ನುವಲ್ಲಿಂದ.
ತಕ್ಕ ಮಟ್ಟಿಗೆ ಅನುಕೂಲಸ್ಥರಾಗಿರುವ ಕುಲಕರ್ಣಿ ಕುಟುಂಬ ಅದ್ದೂರಿಯಾಗಿ ಮದುವೆ ಮಾಡಲು ಅಗತ್ಯವಿದ್ದ ವ್ಯವಸ್ಥೆಗಳನ್ನು ಮಾಡಿಟ್ಟುಕೊಂಡಿತ್ತ. ಆದರೆ ಕೊರೊನಾ ಕಾರಣ ಇದು ಸಾಧ್ಯವಾಗಲಿಲ್ಲ. ಹಾಗೆಂದು ನವ ದಂಪತಿ ಉಳಿದ ಹಣವನ್ನು ಬ್ಯಾಂಕಿಗೆ ಹಾಕಲಿಲ್ಲ.
ಶುಕ್ರವಾರ ಮುಂಬಯಿಯ ಮುಲುಂಡ್ ಸಮೀಪವಿರುವ ನವಘರ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮದುವೆ ಊಟ ಹಾಕಿದರು.ಕೊರೊನಾ ಕಾಲದಲ್ಲಿ ಜೀವದ ಹಂಗು ತೊರೆದು ಮನೆಗೂ ಸರಿಯಾಗಿ ಹೋಗದೆ ದುಡಿಯುತ್ತಿರುವ ಪೊಲೀಸರಿಗೆ ಗೌರವ ಸೂಚಿಸುವ ಚಿಕ್ಕದೊ<ದು ಪ್ರಯತ್ನ ಇದಾಗಿತ್ತು. ಬರೀ ಊಟ ಮಾತ್ರವಲ್ಲ ಜತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ಉಡುಗೊರೆಯಾಗಿ ನೀಡಿದರು.
ಪೊಲೀಸರು ತಮ್ಮ ಎಲ್ಲ ಸುಖ ಸಂತೋಷಗಳನ್ನು ಕಡೆಗಣಿಸಿ ನಮಗಾಗಿ ದುಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಖುಷಿಯಾಗಿಡುವುದು ಮುಖ್ಯ ಎಂದು ಅನ್ನಿಸಿತು. ನಮಗಾಗಿ ತಮ್ಮ ವೈಯಕ್ತಿಕ ಬದುಕನ್ನು ಕೂಡ ಲೆಕ್ಕಿಸದ ಪೊಲೀಸರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎನ್ನುತ್ತಾರೆ ವ ನವ ದಂಯತಿ.