ದಿಲ್ಲಿ : ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಅಮೆರಿಕ ಮತ್ತು ಭಾರತದಲ್ಲಿ ತೀವ್ರ ಹಿನ್ನೆಡೆಯನ್ನು ಎದುರಿಸಿದ ಹಿನ್ನಲೆಯಲ್ಲಿ, ಅಪ್ಲಿಕೇಶನ್‌ನ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಚೀನಾದ ಇಂಟರ್‌ನೆಟ್ ದಿಗ್ಗಜ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಹೊಸ ನಿರ್ವಹಣಾ ಮಂಡಳಿಯನ್ನು ರಚಿಸಲು ಯೋಜನೆ ರೂಪಿಸುತ್ತಿದೆ ಅಥವಾ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಚೀನಾದಿಂದ ಹೊರಗೆ ಇಡುವತ್ತ ಪ್ರಯತ್ನ ನಡೆಸುತ್ತಿದೆ. ಚೀನಾದ ಹೊರಗೆ ಅಪ್ಲಿಕೇಶನ್‌ಗೆ ಪ್ರಧಾನ ಕಛೇರಿಯನ್ನು ಸ್ಥಾಪಿಸುವ ಆಯ್ಕೆಯತ್ತಲೂ ಅದು ಗಮನಹರಿಸಿದೆ ಎಂದು ಹೇಳಲಾಗಿದೆ.
“ನಾವು ನಮ್ಮ ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಸಂಪೂರ್ಣ ಬದ್ಧರಾಗಿದ್ದೇವೆ ಮತ್ತು ನಾವು ಸೃಜನಶೀಲತೆಯನ್ನು ಉತ್ತೇಜಿಸುತ್ತೇವೆ, ಕೋಟ್ಯಾಂತರ ಜನರಿಗೆ ಮನೋರಂಜನೆ, ಸಂತೋಷ ನೀಡುತ್ತೇವೆ. ಉತ್ತಮ ಮುನ್ನಡೆಯುವಿಕೆಗಾಗಿ ಬೈಟ್‌ಡ್ಯಾನ್ಸ್ ಟಿಕ್‌ಟಾಕ್‌ನ ಕಾರ್ಪೋರೇಟ್ ರಚನೆಯಲ್ಲಿ ಬದಲಾವಣೆ ತರಲು ಯೋಜಿಸುತ್ತಿದೆ” ಎಂದು ಟಿಕ್‌ಟಾಕ್ ವಕ್ತಾರರು ಹೇಳಿದ್ದಾರೆ.
ಲಡಾಕ್ ಗಡಿಯಲ್ಲಿ ಭಾರತದ 20 ಯೋಧರನ್ನು ಚೀನ ಸಾಯಿಸಿರುವುದಕ್ಕೆ ಪ್ರತೀಕಾರವಾಗಿ ಕೇ<ದ್ರ ಸರಕಾರ ಟಿಕ್ ಟಾಕ್ ಸೇರಿ ಚೀನದ 58 ಆಪ್‌ಗಳನ್ನು ನಿಷೇಧಿಸಿದೆ.