ರಾಜ್ಯದಲ್ಲಿ ಮತ್ತೆ ಗೋಹತ್ಯೆ ಕಾನೂನು ನಿಷೇಧ ಕಾನೂನು ?

ಬೆಂಗಳೂರು: ಗುಜರಾತ್ ಮತ್ತು ಉತ್ತರ ಪ್ರದೇಶದ ಗೋಹತ್ಯೆ ಮತ್ತು ಗೋ ರಕ್ಷಣಾ ಮಸೂದೆಯನ್ನು ಅಧ್ಯಯನ ಮಾಡಿ ಕರ್ನಾಟಕದಲ್ಲಿಯೂ ಈ ಕಾಯಿದೆಯನ್ನು ಮತ್ತೆ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಾಹಿತಿ ನೀಡಿದ್ದಾರೆ.

ಇದರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡವೊಂದನ್ನು ಗುಜರಾತ್, ಉತ್ತರ ಪ್ರದೇಶಗಳಿಗೂ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಮಸೂದೆ ಹೇಗೆ ಜಾರಿಗೆ ತರಲಾಗುತ್ತಿದೆ ಎಂಬುದನ್ನು ಗಮನಿಸಿಕೊಂಡು ,ರಾಜ್ಯದಲ್ಲಿಯೂ ಗೋ ಹತ್ಯೆ ಮತ್ತು ರಕ್ಷಣಾ ಕಾಯಿದೆ 2012ನ್ನು ಜಾರಿಗೆ ತರುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಈ ಕಾಯಿದೆ  ಜಾರಿಯಾದ ಬಳಿಕ ಗೋ ಹತ್ಯೆ, ಮಾರಾಟ, ಬೇರೆ ರಾಜ್ಯಗಳಿಗೆ ಗೋವುಗಳ ಮಾರಾಟ ನಿಷೇಧ ಮಾಡಲಾಗುತ್ತದೆ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಥಳೀಯ ಗೋ ತಳಿಗಳ ರಕ್ಷಣೆ ಮತ್ತು ವೃದ್ಧಿಗಾಗಿಯೂ ಕ್ರಮ ಕೈಗೊಳ್ಳಲಾಗುವುದು. ಗೋ ರಕ್ಷಣೆ ಮತ್ತು ಅವುಗಳಿಗೆ ಆಶ್ರಯ ನೀಡುವ ಕಾರಣಕ್ಕೆ ಗೋ ಶಾಲೆಗಳನ್ನು ನಿರ್ಮಿಸುವುದು, ಗೋ ಸೇವಾ ಆಯೋಗ ಸ್ಥಾಪನೆ ಮೊದಲಾದ ಅನೇಕ ವಿಚಾರಗಳ ಬಗ್ಗೆಯೂ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. ಆ ಮೂಲಕ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವುದಾಗಿಯೂ ಅವರು ತಿಳಿಸಿದ್ದಾರೆ.

2010ರ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಕಾನೂನನ್ನು ಮಂಡಿಸಲಾಗಿತ್ತು. ಈ ಕಾಯಿದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡುವಂತೆಯೂ ಆಗಿನ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಇದಾದ ಬಳಿಕ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಈ ಕಾಯಿದೆ ಜಾರಿಯಾಗಲಿಲ್ಲ ಎಂದೂ ಚೌಹಾಣ್ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿನ ಸಮಸ್ಯೆ ಬಗೆಹರಿದ ಬಳಿಕ ರಾಜ್ಯದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳ ತಂಡ ಅಧ್ಯಯನಕ್ಕೆ ತೆರಳಲಿರುವುದಾಗಿ ಚೌಹಾಣ್‌ ಹೇಳಿದ್ದಾರೆ.

ಈಗಾಗಲೇ ಭಾರತದ ಬಿಹಾರ, ತೆಲಂಗಾಣ, ಅಸ್ಸಾಂ, ದೆಹಲಿ, ಹರಿಯಾಣ, ಗುಜರಾತ್, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ, ಪಂಜಾಬ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿಯೂ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿದ್ದು, ಕರ್ನಾಟಕದಲ್ಲಿಯೂ ಇನ್ನೂ ಕೆಲವು ಸಮಯದಲ್ಲೇ ಈ ಕಾಯಿದೆ ಜಾರಿಗೆ ಬರಲಿದೆ ಎಂದೂ ಅವರು ತಿಳಿಸಿದ್ದಾರೆ.

error: Content is protected !!
Scroll to Top