8 ಪೊಲೀಸರನ್ನು ಸಾಯಿಸಿದ ಪಾತಕಿಗಳ ಬೇಟೆಗೆ ತಯಾರಾಗಿದ್ದಾರೆ ಉತ್ತರ ಪ್ರದೇಶ ಪೊಲೀಸರು
ಲಕ್ನೊ : ಗ್ಯಾಂಗ್ ಲೀಡರ್ ವಿಕಾಸ್ ದುಬೆ ಸೇರಿ 6 ಗೂಂಡಾಗಳು ಮಟಾಷ್, 12 ಮಂದಿ ನಾಪತ್ತೆ, ಮೂವರು ಕಂಬಿಯ ಹಿಂದೆ. ಇದು ಜು.3ರಂದು 8 ಮಂದಿ ಪೊಲೀಸರನ್ನು ಹೊಂಚಿ ಹಾಕಿ ಕೊಂದ ಪಾತಕಿ ಗ್ಯಾಂಗ್‌ಗೆ ಆಗಿರುವ ಗತಿ. ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರ ಹತ್ಯೆಗೆ ಷಡ್ಯಂತ್ರ ರಚಿಸಿದ್ದ ಗ್ಯಾಂಗ್ ಲೀಡರ್ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ಕಾನ್ಪುರ ಸಮೀಪ ಪೊಲೀಸರ ಗುಂಡಿಗೆ ಬಲಿಯಾಗುವುದರೊಂದಿಗೆ ಈ ಪಾತಕ ಸಾಮ್ರಾಜ್ಯದ ಕತೆಯೂ ಮುಗಿದಂತಾಗಿದೆ.
ಪೊಲೀಸರ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ದುಬೆಗಾಗಿ ಪೊಲೀಸರು ದಪಡ್ಡ ಬಲೆಯನ್ನೇ ಬೀಸಿದ್ದರು. ಅವನ ಹೆ<ಡತಿ ಮತ್ತು ಕೆಲವು ಬಂಧುಗಳನ್ನು ಹಾಗೂ ನಿಕಟವರ್ತಿಗಳನ್ನು ಬಂಧಿಸಿ ಮಾಹಿತಿ ಪಡೆಯಲಾಗಿತ್ತು.