ಮುಂಬಯಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ೧೦೦೦ ರೂ. ದಂಡ


ಮುಂಬಯಿ : ಮುಂಬಯಿಯಲ್ಲಿ ಕೊರೊನ ವೈರಸ್‌ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಅರ್ಧಕ್ಕರ್ಧ ಮುಂಬಯಿ ಸೀಲ್‌ ಡೌನ್‌ ಆಗಿದೆ.ಸರಕಾರ ಹಾಗೂ ಸ್ಥಳೀಯಾಡಳಿತ ಕೊರೊನ ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ.ಈ ಹಿನ್ನೆಲೆಯಲ್ಲಿ ಬಿಎಂಸಿ ಮಾಸ್ಕ್‌ ನಿಯಮವನ್ನು ಇನ್ನಷ್ಟು ಬಿಗುಗೊಳಿಸಿದೆ. ಮಾಸ್ಕ್‌ ಧರಿಸದವರಿಗೆ ೧೦೦೦ ರೂ.ದಂಡ ವಿಧಿಸುವ ಕಠಿಣ ಆದೇಶವನ್ನು ಬಿಎಂಸಿ ಹೊರಡಿಸಿದೆ.ಮಾಸ್ಕ್‌ ಕಡ್ಡಾಯ ನಿಯಮ ಕಳೆದ ಎಪ್ರಿಲ್ ನಲ್ಲಿಯೇ ಆದೇಶ ಹೊರಡಿಸಲಾಗಿತ್ತು.ಇದೀಗ ಈ ನಿಯಮವನ್ನು ಕಠಿಣಗೊಳಿಸಲಾಗಿದೆಯಷ್ಟೆ.
ನಗರದಲ್ಲಿ ಕೊರೊನ ತಾಂಡವ ತೀವ್ರವಾಗಿದ್ದರೂ ಜನರು ಕ್ಯಾರೆ ಎನ್ನದೆ ತಿರುಗಾಡುತ್ತಿದ್ದಾರೆ.ಜನರಿಗಿನ್ನೂ ಪರಿಸ್ಥಿತಿಯ ಭೀಕರತೆಯ ಅರಿವಾಗಿಲ್ಲ.ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ.ಈ ಹಿನ್ನೆಯಲ್ಲಿ ಬಿಎಂಸಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ.ಮಾಸ್ಕ್‌ ಧರಿಸದಿದ್ದರೆ ಅವರಿಗೆ ಮಾತ್ರವಲ್ಲ ಉಳಿದವರಿಗೂ ಅಪಾಯ.
ಕ್ರಮೇಣ ಲಾಕ್‌ ಡೌನ್‌ ಸಡಿಲಿಕೆಯಾಗುತ್ತಿರುವಂತೆ ವೈರಸ್‌ ಹರಡುವ ಪ್ರಮಾಣವೂ ಹೆಚ್ಚುವ ಸಾಧ್ಯತೆಯೂ ಹೆಚ್ಚು ಇದೆ. ಹೀಗಾಗಿ ಜನರು ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್‌ ಧರಿಸುವುದು ಅತ್ಯಗತ್ಯ.
ಮೂರು ಲೇಯರ್‌, ಸಾಮಾನ್ಯ ಅಥವಾ ಮನೆಯಲ್ಲೇ ಹೊಲಿದದ್ದಾರೂ ಆಗಬಹುದು ಮಾಸ್ಕ್‌ ಧರಿಸಬೇಕು.ಇಲ್ಲದಿದ್ಗರೆ ನಗರಪಾಲಿಕೆ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ೧೦೦೦ ರೂ.ದಂಡ ವಸೂಲು ಮಾಡುವ ಅಧಿಕಾರವಿದೆ.

ಯಾರೆಲ್ಲ ಮಾಸ್ಕ್‌ ಧರಿಸಬೇಕು ?
-ಬೀದಿಯಲ್ಲಿ ಓಡಾಡುವವರು, ಕಚೇರಿಗೆ ಹೋಗುವವರು,ಅಂಗಡಿ, ಮಾರುಕಟ್ಟೆ,ಆಸ್ಪತ್ರೆಗಳಿಗೆ ಹೋಗುವವರು
-ಸದವಂತ ವಾಹನಗಳಲ್ಲಿ ಮತ್ತು ಸಾರ್ವಜನಿಕ ವಾಹಜಗಳಲ್ಲಿ ಪ್ರಯಾಣಿಸುವವರು
-ಸೈಟ್‌ಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವವರ

-ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು.

error: Content is protected !!
Scroll to Top