ಕಾರ್ಕಳ : ನಾಲ್ಕು ಕ್ಲಬ್‌ಗಳನ್ನೊಳಗೊಂಡ ರಿಜನ್ 6ರ ಲಯನ್ಸ್ ವಲಯಾಧ್ಯಕ್ಷರಾಗಿ ಎಂಜೆಎಫ್ ಲಯನ್ ಪ್ರಶಾಂತ್ ಶೆಟ್ಟಿ ಗುತ್ತುಮನೆ ಬೈಲೂರು ಆಯ್ಕೆಯಾಗಿದ್ದಾರೆ. ಮೇ 31ರಂದು ಲಯನ್ಸ್ ಉಡುಪಿ ಜಿಲ್ಲಾ ಗರ್ವನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಪ್ರಶಾಂತ್ ಶೆಟ್ಟಿ ಅವರು 2025-26ನೇ ಸಾಲಿನಲ್ಲಿ ನೀರೆ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಆರೋಗ್ಯ ಶಿಬಿರಗಳು, ಆಶಕ್ತರಿಗೆ ಸಹಾಯಧನ ವಿತರಣೆ, ಬಸ್ ತಂಗುದಾಣ ನಿರ್ಮಾಣ, ಬೈಲೂರು ಸರಕಾರಿ ಪ್ರೌಢಶಾಲಾ ಶಾಲಾ ಪರಿಸರದಲ್ಲಿ ಲಯನ್ಸ್ ವನ ನಿರ್ಮಾಣ ಮತ್ತು ವಿದ್ಯಾರ್ಥಿಗಳಿಗೆ ಒಂದು ಸಾವಿರ ಹಲಸಿನ ಸಸಿ ವಿತರಣೆ, ಶೈಕ್ಷಣಿಕ ತರಬೇತಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಇವರು ನೀರೇ ಬೈಲೂರು ಸರಕಾರಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಶಿವಾಯ ಗೆಳಯರ ಬಳಗದ ಅಧ್ಯಕ್ಷರಾಗಿ ಹಾಗೂ ಬೀದಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ನೂತನ ಅಧ್ಯಕ್ಷರ ಆಯ್ಕೆ
ಪ್ರಶಾಂತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರೆ ಬೈಲೂರು ಲಯನ್ಸ್ ಕ್ಲಬ್ ಸಭೆಯಲ್ಲಿ ಕ್ಲಬ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನೆಲ್ಸನ್ ಮಚಾದೋ, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ ಜಾರ್ಕಳ ಆಯ್ಕೆಯಾಗಿದ್ದಾರೆ.

























