ಇಂದು ಪೊಲೀಸ್ ಇಲಾಖೆಯಿಂದ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ‘ನೇಮೋತ್ಸವ’

ಕಾರ್ಕಳ : ಕಾರ್ಕಳದ ಜನಜೀವನದಲ್ಲಿ ಅತೀವ ನಂಬಿಕೆಯ ಕೇಂದ್ರವಾಗಿರುವ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಇಂದು (ಮಂಗಳವಾರ) ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವತಿಯಿಂದ ಕಾಲಾವಧಿ ನೇಮೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ. ಪೊಲೀಸ್ ಇಲಾಖೆಯ ವತಿಯಿಂದ ನಡೆಯುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ದೈವಸ್ಥಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
​ಇಂದು ರಾತ್ರಿ ಗಂಟೆ 8:30ಕ್ಕೆ ದೈವದ ಭವ್ಯ ಗಗ್ಗರ ಸೇವೆ ಪ್ರಾರಂಭವಾಗಲಿದ್ದು, ತದನಂತರ ರಾತ್ರಿ 9:30ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆಯುವ ಈ ನೇಮೋತ್ಸವವು ನಾಡಿನ ಶಾಂತಿ ಮತ್ತು ಸುಭಿಕ್ಷೆಗಾಗಿ ಪ್ರಾರ್ಥಿಸುವ ವಿಶೇಷ ಸಂದರ್ಭವಾಗಿದೆ.
​ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ನಡೆಯಲಿರುವ ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸಬೇಕೆಂದು ಪೊಲೀಸ್ ಇಲಾಖೆಯು ಪ್ರಕಟಣೆಯ ಮೂಲಕ ಆತ್ಮೀಯವಾಗಿ ಆಹ್ವಾನಿಸಿದೆ







































error: Content is protected !!
Scroll to Top