ಕಾರ್ಕಳ : ಹಿರಿಯಂಗಡಿ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆ ಸಂಗ್ರಹಿಸಿಡುವ ಕೊಠಡಿಯೊಳಗಡೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಳಗಡೆ ಇದ್ದ ಆಂಬ್ಯುಲೆನ್ಸ್‌ಗೆ ಹಾನಿಯಾಗಿ ಕಟ್ಟಿಗೆಗಳು ಸುಟ್ಟು ಕರಕಲಾದ ಘಟನೆ ಮಾ. 22ರಂದು ನಡೆದಿದೆ.
ಮಧ್ಯಾಹ್ನ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಕಟ್ಟಿಗೆಗಳು ಸುಟ್ಟು ಕರಲಾಗಿದೆ. ಘಟನೆ ಕುರಿತಾಗಿ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗುತ್ತಿದೆ. ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ಅವರ ನೇತೃತ್ವದಲ್ಲಿ ಸಹಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ರೂಪೇಶ್, ಚಾಲಕ ಆಲ್ವಿನ್, ದಿನೇಶ್ ಮತ್ತು ಭೀಮಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.











