ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಕಡಿತ

ರೈತ ವಿರೋಧಿ ಕ್ರಮ – ಸರಕಾರದ ವಿರುದ್ಧ ಸುನಿಲ್‌ ಕುಮಾರ್‌ ಕಿಡಿ

ಕಾರ್ಕಳ : ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿರುವ ಕುರಿತು ಶಾಸಕ ವಿ. ಸುನಿಲ್‌ ಕುಮಾರ್‌ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆಳುವ ಸರಕಾರ ದಿವಾಳಿಯಾದಾಗ ಅಥವಾ ದೃಷ್ಟಿ, ಶ್ರವಣ ದೋಷ ಪೀಡಿತವಾದಾಗ ಮಾತ್ರ ಇಂಥದೊಂದು ಜನವಿರೋಧಿ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಎಂದು ಸುನಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ತುಳಿಯುತ್ತಿರುವ ದುಶಾಃಸನ ಆಡಳಿತಕ್ಕೆ ಕಾರ್ಕಳ-ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿರುವುದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಈ ಯೋಜನೆಯ ಸ್ಥಾಪನೆಯ ಉದ್ದೇಶವೇ ನೀರಾವರಿ ಹಾಗೂ ರೈತ ಕಲ್ಯಾಣ. ರಾಜ್ಯದಲ್ಲಿ ಈಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆ ಹಿಂದಿನ ವರ್ಷಗಳಿಗಿಂತ ತೀವ್ರ ಪ್ರಮಾಣದಲ್ಲಿ ಬಾಧಿಸುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಈ ಏತ ನೀರಾವರಿ ಯೋಜನೆಗೆ ಸಂಬಂಧಪಟ್ಟ 2 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತ ಮಾಡಿರುವುದು ಅಸಮಂಜಸ ಹಾಗೂ ರೈತ ವಿರೋಧಿ ಕ್ರಮ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಧನ ಇಲಾಖೆ ಅಸಮರ್ಥತೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂಧನ ಇಲಾಖೆಯ‌ ನಿರ್ವಹಣೆ ಹಾಳು ಬಿದ್ದು ಹೋಗಿದೆ. ಹೀಗಾಗಿ ಮೆಸ್ಕಾಂ ಏತ ನೀರಾವರಿ ಯೋಜನೆಯ ಪ್ಯೂಜ್ ಕಿತ್ತು ಸಂಪರ್ಕ ಕಡಿತಗೊಳಿಸಿ ಮೂರು ದಿನ ಕಳೆದರೂ ಸರಕಾರ ಮೌನಕ್ಕೆ ಶರಣಾಗಿದೆ. ಸರಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇನೆ. ಅನ್ನದಾತರ ಬದುಕಿನೊಟ್ಟಿಗೆ ಆಟವಾಡಬೇಡಿ ಎಂದು ಸುನಿಲ್‌ ಕಿಡಿಕಾರಿದ್ದಾರೆ.









































































































error: Content is protected !!
Scroll to Top