ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮಣಿರಾಜ್ ಶೆಟ್ಟಿ – ವಿಕಾಸ ಕಚೇರಿಯಲ್ಲಿ ಅಭಿನಂದನೆ

ಕಾರ್ಕಳ : ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನ್ಯಾಯವಾದಿ ಮಣಿರಾಜ್ ಶೆಟ್ಟಿಯವರನ್ನು ರಾಜ್ಯ ಬಿಜೆಪಿ ಆಯ್ಕೆ ಮಾಡಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಮಣಿರಾಜ್ ಶೆಟ್ಟಿಯವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಎರಡು ಬಾರಿ, ನಾಲ್ಕು ಬಾರಿ ಕಾರ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಹೀಗೆ ಪಕ್ಷದ ವಿವಿಧ ಘಟಕಗಳಲ್ಲಿ ಕಳೆದ 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಣಿರಾಜ ಶೆಟ್ಟಿಯವರಿಗೆ ಫೆ. 23ರಂದು ವಿಕಾಸ ಕಚೇರಿಯಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅಭಿನಂದಿಸಿದರು. ಈ ಸಂದರ್ಭ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಪಕ್ಷದ ಪ್ರಮುಖರಾದ ಜಯರಾಮ್‌ ಸಾಲಿಯಾನ್‌, ಹರೀಶ್‌ ನಾಯಕ್‌, ರವೀಂದ್ರ ಕುಮಾರ್‌ ಹಾಗೂ ಸತೀಶ್‌ ಪೂಜಾರಿ ಬೋಳ ಉಪಸ್ಥಿತರಿದ್ದರು.





























































































error: Content is protected !!
Scroll to Top