ಫೆ. 24 : ಜೇಸಿಐ ಕಾರ್ಕಳ ರೂರಲ್‌ ಹತ್ತನೇ ವರ್ಷದ ಸಂಭ್ರಮ – ದಶರಥ

ಕಾರ್ಕಳ : ಜೇಸಿಐ ಕಾರ್ಕಳ ರೂರಲ್‌ ಘಟಕದ ಹತ್ತನೇ ವರ್ಷದ ಸಂಭ್ರಮ ಕಾರ್ಯಕ್ರಮ -ದಶರಥ ಫೆ. 24ರಂದು ಸಂಜೆ 4 ಗಂಟೆಗೆ ಸ್ವಾಗತ್‌ ಹೊಟೇಲ್‌ನ ಅನಂತರಾಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ವಲಯ 15 ಜೇಸಿಐ ಭಾರತದ ವಲಯ ಉಪಾಧ್ಯಕ್ಷ ಅರುಣ್‌ ಪೂಜಾರಿ ಮಾಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ಆಡಳಿತ ಮಂಡಳಿ ಸದಸ್ಯ ವೈ. ಸುಕುಮಾರ್‌, ಮಿಷನ್‌ ಒನ್‌ ಲ್ಯಾಕ್‌ ನ್ಯಾಷನಲ್‌ ಚೇರ್‌ಮನ್‌ ಅಭಿಲಾಷ್‌ ಬಿ.ಎ., ಸುಗುಣ ವಿಶ್ವನಾಥ ಶೆಟ್ಟಿ ಕುಡುಪುಲಾಜೆ, ವಲಯ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ಹಾಗು ಜೇಸಿಐ ಬೆಳ್ತಂಗಡಿ ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ಭಾಗಿಯಾಗಲಿದ್ದಾರೆ.

ಪದಗ್ರಹಣ ಸಮಾರಂಭ
ಜೆಸಿಐ ರೂರಲ್‌ ಕಾರ್ಕಳ ಘಟಕದ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಜೆ 7 ಗಂಟೆಗೆ ನಡೆಯಲಿದೆ. ಅಧ್ಯಕ್ಷರಾಗಿ ಸೃಜನ್‌ ಪೂಜಾರಿ ಮತ್ತವರ ತಂಡ ಅಧಿಕಾರ ಸ್ವೀಕರಿಸಲಿದ್ದಾರೆ.















































\















error: Content is protected !!
Scroll to Top