ನಾಗರಾಜ್‌ ಕಾಡುಹೊಳೆ ಅವರಿಗೆ ಕೋಸ್ಟಲ್‌ ಕಾಮಿಡಿ ಸ್ಟಾರ್‌ ರನ್ನರ್‌ ಆಪ್‌ ಪ್ರಶಸ್ತಿ

ಕಾರ್ಕಳ : ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಡಿ.1ರಂದು ಉಡುಪಿ ಯಕ್ಷಗಾನ ಕಲಾರಂಗದಲ್ಲಿ ನಡೆದ ಕೋಸ್ಟಲ್‌ ಕಾಮಿಡಿ ಸ್ಟಾರ್‌ ತುಳು ಸ್ಟ್ಯಾಂಡ್‌ ಅಫ್‌ ಕಾಮಿಡಿ ಸ್ಪರ್ಧೆಯಲ್ಲಿ ನಾಗರಾಜ್‌ ಕಾಡುಹೊಳೆ ಅವರಿಗೆ ಎರಡನೇ ರನ್ನರ್‌ ಆಪ್‌ ಪ್ರಶಸ್ತಿ ದೊರೆತಿದೆ. ನಾಗರಾಜ್‌ ಅವರು ʼಕಾಲ ಬದಲಾತುಂಡುʼ ಎಂಬ ಹಾಸ್ಯಮಯ ಸಾಮಾಜಿಕ ನಾಟಕದ ರಚನೆ, ನಿರ್ದೇಶನ ಮತ್ತು ಅಭಿನಯಿಸಿದ್ದಾರೆ. ದೈಜಿವಲ್ಡ್‌ ಮಾಧ್ಯಮ ಸಂಸ್ಥೆಯ ಕಾಮಿಡಿ ರಾಜರಾಣಿ ಸ್ಪರ್ಧೆಯಲ್ಲೂ ಭಾಗವಹಿಸಿ ಮನ್ನಣೆಗಳಿಸಿದ್ದರು. ಪ್ರಸ್ತುತ ಅಭಿಷೇಕ್‌ ಬಜಗೋಳಿ ಸಾರಥ್ಯದ ಬೊಳ್ಳಿ ಕಲಾವಿದೆರ್‌ ಬಜಗೋಳಿ ತಂಡದಲ್ಲಿ ಅಭಿನಯಿಸುತ್ತಿದ್ದಾರೆ.





























































































error: Content is protected !!
Scroll to Top