ಶ್ರವಣೇಂದ್ರಿಯ ಪಂಚೇಂದ್ರಿಯಗಳಲ್ಲಿ ಒಂದು. ಕಿವಿಯು ಶಬ್ದಗಳನ್ನು ಗ್ರಹಿಸುವುದಲ್ಲದೆ ನಮ್ಮ ಶರೀರದ ಸಮತೋಲನವನ್ನು ಇಟ್ಟುಕೊಳ್ಳಲು ಸಹಾಯಮಾಡುತ್ತದೆ. ಕಿವಿಯನ್ನು ಹೊರಗಿವಿ, ಮಧ್ಯ ಕಿವಿ ಹಾಗೂ ಒಳಗಿರವಿ ಎಂದು ವಿಭಾಗಿಸಬಹುದು.
ಕಿವಿಗಳ ರೋಗಗಳಿಗೆ ಬಾಹ್ಯ ಹಾಗೂ ಆಂತರಿಕ ಕಾರಣಗಳಿರುತ್ತವೆ. ಸಾಮಾನ್ಯವಾಗಿ 60 -70 ಡೆಸಿಬಲ್ ಪ್ರಮಾಣದ ಶಬ್ದವು ಕಿವಿಗೆ ತೊಂದರೆ ಮಾಡುವುದಿಲ್ಲ. ಆದರೆ 95 ದೆಸಿಬಲ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಶಬ್ದವನ್ನು ನಿರಂತರವಾಗಿ ಕೇಳಿದರೆ ನಮಗೆ ಕಿವಿ ನೋವಾಗಿ ಶ್ರವಣನಷ್ಟವಾಗಬಹುದು.
ಕಿವಿಗಳ ಕೆಲವು ಸಾಮಾನ್ಯ ರೋಗಗಳು ಹೀಗಿವೆ
ಓಟಿಟಿಸ್ ಮೀಡಿಯಾ-
- ಕಾರಣಗಳು -ಮಧ್ಯ ಕಿವಿಯ ಸೋಂಕು, ಹೆಚ್ಚಾಗಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳಿಂದ ಉಂಟಾಗುತ್ತದೆ.
- ಲಕ್ಷಣಗಳು- ಕಿವಿ ನೋವು, ಜ್ವರ, ಶ್ರವಣ ನಷ್ಟ,
ಈಜುಗಾರರ ಕಿವಿಯ ಸೋಂಕು (ಓಟಿಟಿಸ್ ಎಕ್ಸ್‌ಟರ್ನಾ)

- ಕಾರಣಗಳು-ಹೊರಗಿನ ಕಿವಿ ಕಾಲುವೆಯ ಸೋಂಕು, ಹೆಚ್ಚಾಗಿ ಈಜುವುದರಿಂದ ಅಥವಾ ಆಘಾತದಿಂದಾಗಿ.
- ಲಕ್ಷಣಗಳು – ತುರಿಕೆ, ಕೆಂಪು, ನೋವು, ಕಿವಿ ಸೋರುವುದು
ಕಿವಿಯ ಮೇಣದ ಅಡಚಣೆ
- ಕಾರಣಗಳು- ಕಿವಿಯ ಮೇಣದ ಶೇಖರಣೆ, ಅತಿಯಾದ ಉತ್ಪಾದನೆ ಅಥವಾ ಅನುಚಿತ ಶುಚಿಗೊಳಿಸುವಿಕೆಯಿಂದಾಗಿರಬಹುದು.
- ಲಕ್ಷಣಗಳು – ಶ್ರವಣ ನಷ್ಟ, ಅಸ್ವಸ್ಥತೆ, ತುರಿಕೆ.
ಟಿನ್ನಿಟಸ್
- ಕಾರಣಗಳು – ಶ್ರವಣ ನಷ್ಟ, ಕಿವಿಯ ಗಾಯ, ಕೆಲವು ಔಷಧಿಗಳು
- ಲಕ್ಷಣಗಳು -ಕಿವಿಗಳಲ್ಲಿ ರಿಂಗಿಂಗ್, ಝೇಂಕರಿಸುವ ಶಬ್ದ ಅಥವಾ ಇತರ ಶಬ್ದಗಳು ಕೇಳಿಸುವುದು.
ಶ್ರವಣ ನಷ್ಟ
- ಕಾರಣಗಳು – ವಯಸ್ಸು ಹೆಚ್ಚಾದಂತೆ ಶಬ್ದ ಗ್ರಹಣ ಸಾಮರ್ಥ್ಯ ಕಡಿಮೆಯಾಗುವುದು, ಸೋಂಕುಗಳು ಅಥವಾ ಆಘಾತ.
- ಲಕ್ಷಣಗಳು -ಶ್ರವಣ ತೊಂದರೆ
ತಲೆ ತಿರುಗುವಿಕೆ – ಇದು ಅನೇಕ ರೋಗಗಳಿಂದ ಆಗಬಹುದು. ಆದರೆ ಇದರ ಕಾರಣಗಳಲ್ಲಿ ಒಂದು ಕಿವಿಯ ಸಮತೋಲನದ ವ್ಯತ್ಯಾಸವಾಗಿರುವುದು.
ಕಿವಿಯ ಆರೈಕೆ ಹೀಗೆ ಇರಲಿ
- ಅತಿಯಾದ ಶಬ್ದಗಳಿಂದ ದೂರವಿರಿ. ಇಯರ್ ಫೋನ್‌ಗಳನ್ನು ಅಧಿಕ ಸಮಯದವರೆಗೆ ಬಳಸಬೇಡಿ.
- ಕಿವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.
- ಕೊಬ್ಬರಿ ಎಣ್ಣೆಯಿಂದ ಹೊರಗಿವಿಯನ್ನು ವಾರಕ್ಕೊಮ್ಮೆ ಮಸಾಜ್ ಮಾಡಿಕೊಳ್ಳಿ.
- ಎರಡೆರಡು ಹನಿ ಎಳ್ಳೆಣ್ಣೆಯನ್ನು ಕಿವಿಗಳಿಗೆ ವಾರಕ್ಕೆ ಒಮ್ಮೆ ಹಾಕಬಹುದು .
- ತಣ್ಣನೆಯ ಗಾಳಿಗೆ ಹೋದರೆ ಕಿವಿಯನ್ನು ಮುಚ್ಚಿಟ್ಟುಕೊಳ್ಳಿ.
- ಮಾನಸಿಕ ಒತ್ತಡವನ್ನು ಕಮ್ಮಿ ಮಾಡಿ.
- ಶುದ್ಧ ಸಾತ್ವಿಕ ಆಹಾರ ಸೇವಿಸಿ.
- ಯೋಗ ಪ್ರಾಣಾಯಾಮವನ್ನು ರೂಡಿಸಿಕೊಳ್ಳಿ. ಭುಜಂಗಾಸನ, ಅಧೋಮುಖ ಶ್ವಾನಾಸನ, ಉಷ್ಟ್ರಾಸನ’ ವಿಪರೀತ ಕರಣಿ ಹಾಗೂ ಬ್ರಾಹ್ಮರಿ ಪ್ರಾಣಾಯಾಮ ಕಿವಿಗಳಿಗೆ ಒಳ್ಳೆಯದು.





