ಜೇಸಿಐ ಕಾರ್ಕಳದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ ಅವಿನಾಶ್‌ ಶೆಟ್ಟಿ – ಕಾರ್ಯದರ್ಶಿ ಸುಶಾಂತ್‌ ಶೆಟ್ಟಿ

ಕಾರ್ಕಳ : 2026ನೇ ಸಾಲಿನ ಜೇಸಿಐ ಕಾರ್ಕಳದ ನೂತನ ಅಧ್ಯಕ್ಷರಾಗಿ ಅಮ್ಮನ ನೆರವು ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಅವಿನಾಶ್ ಜಿ. ಶೆಟ್ಟಿ, ಕಾರ್ಯದರ್ಶಿಯಾಗಿ ಸಿವಿಲ್‌ ಇಂಜಿನೀಯರ್‌ ಸುಶಾಂತ್‌ ಶೆಟ್ಟಿ ಹಿರಿಯಂಗಡಿ ಅವರು ಆಯ್ಕೆಯಾಗಿದ್ದಾರೆ. ನ. 13ರಂದು ಜೇಸಿಐ ಕಾರ್ಯಾಲಯದಲ್ಲಿ ಜೇಸಿಐ ಅಧ್ಯಕ್ಷೆ ಶ್ವೇತಾ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು, ಉಪಾಧ್ಯಕ್ಷರಾಗಿ ಸುಶ್ಮಿತಾ ರಾವ್, ರಕ್ಷಿತ್ ರಾವ್, ಶಿವ ಕುಮಾರ್, ಶಾಹಿನ್ ರಿಜ್ವಾನ್ ಖಾನ್, ರೇವತಿ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಿಜ್ವಾನ್ ಖಾನ್, ಕೋಶಾಧಿಕಾರಿಯಾಗಿ ಮಂಜುನಾಥ್ ಡಿ. ಅವರು ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಪ್ರಚಿತ್ ಕುಮಾರ್, ಡಾ. ಮುರಳೀಧರ್‌ ಭಟ್‌, ವಿಘ್ನೇಶ್ ಪ್ರಸಾದ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಜೇಸಿಐ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.







error: Content is protected !!
Scroll to Top