ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ

ಕಾರ್ಕಳ : ದೇವರಾಧನೆ ಕ್ಷೇತ್ರದಲ್ಲಿ 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಇವರನ್ನು ಶ್ರೀಕ್ಷೇತ್ರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷವಾದಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭದಲ್ಲಿ ಗೌರವಿಸಲಾಯಿತು. ದೇವಸ್ಥಾನಕ್ಕೆ 55 ವರ್ಷಗಳಿಂದ ದೇವರನ್ನು ಹೊರುವ ಮತ್ತು ಬಲಿ ಸೇವೆಯನ್ನು ನೀಡುತ್ತಿರುವ ಇವರನ್ನು ದೇವಳದ ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸಲಾಯಿತು. ಕ್ಷೇತ್ರದ ತಂತ್ರಿವರೇಣ್ಯರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ, ಕ್ಷೇತ್ರದ ಆಡಳಿತ ಮೊಕ್ತೆಸರ ಗಿರೀಶ್ ರಾವ್, ಮೊಕ್ತೆಸರರಾದ ಗಣೇಶ್ ರಾವ್, ಸುಧೀಂದ್ರ ರಾವ್, ರಾಮಚಂದ್ರ ರಾವ್‌, ದಯಾನಂದ ರಾವ್, ಸೇವಾ ಸಮಿತಿಯ ಸಂಚಾಲಕರಾದ ವೀರೇಂದ್ರ ರಾವ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು



































































































error: Content is protected !!
Scroll to Top